
ಪ್ರಜಾವಾಣಿ ವಾರ್ತೆ
ಕೊಳ್ಳೇಗಾಲ: ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥಕ್ಕೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಪದಾಧಿಕಾರಿಗಳು ಹಾಗೂ ವಿವಿಧ ಸಮಾಜದ ಮುಖಂಡರು ಶನಿವಾರ ಅದ್ದೂರಿಯಾಗಿ ಸ್ವಾಗತಿಸಿದರು.
ನಗರದ ಜೆ.ಎಸ್.ಎಸ್ ಕಾಲೇಜು ಮುಂಭಾಗದಲ್ಲಿ ರಥಯಾತ್ರೆಗೆ ಮಹಾಸಭೆ ಗೌರವಧ್ಯಕ್ಷರು ಮತ್ತು ಗುಂಡೇಗಾಲ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಚಾಲನೆ ನೀಡಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ತಾಲ್ಲೂಕು ಘಟಕದ ಅಧ್ಯಕ್ಷ ತಿಮ್ಮರಾಜೀಪುರ ಪುಟ್ಟಣ್ಣ ಮಾತನಾಡಿ, ‘ಜ.15 ರಿಂದ 20 ರವರೆಗೆ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥಯಾತ್ರೆ ಮಹದೇಶ್ವರ ಬೆಟ್ಟದಲ್ಲಿ ಚಾಲನೆ ದೊರೆತು ಇಂದು ಕೊಳ್ಳೇಗಾಲಕ್ಕೆ ಆಗಮಿಸಿದೆ. ನಮ್ಮ ಸಂಘ ಹಾಗೂ ಎಲ್ಲಾ ಸಮಾಜದ ಮುಖಂಡರು ಅದ್ದೂರಿಯಾಗಿ ಸ್ವಾಗತಿಸಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಯಳಂದೂರು ಕಡೆಗೆ ಬೀಳ್ಕೊಡಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಸತ್ತೂರು ಜಾತ್ರಾ ಮಹೋತ್ಸವಕ್ಕೆ ಬರುವ ಮೂಲಕ ಯಶಸ್ವಿಗೊಳಿಸಿ’ ಎಂದು ಕೋರಿದರು.
ಮಹಾಸಭೆ ಕಾರ್ಯದರ್ಶಿ ಮಹೇಶ್, ಮಾಜಿ ಅಧ್ಯಕ್ಷ ಎಂ.ಬಸವರಾಜು, ಪದಾಧಿಕಾರಿಗಳಾದ ಜಿ.ನಟರಾಜು, ಕೆಂಪನಪಾಳ್ಯ ಮಂಜುನಾಥ್, ಜೆಎಸ್ಎಸ್ ಕಾಲೇಜು ಪ್ರಾಂಶುಪಾಲ ಕೊಂಗಳಪ್ಪ, ಜಾಗತಿಕ ಲಿಂಗಾಯತ ಸಂಘದ ಬಿಂದು ಲೋಕೇಶ್, ಮಧುವನಹಳ್ಳಿ ಸುಂದರಪ್ಪ, ಯುಪಿಎಸ್ ಮಹದೇವಸ್ವಾಮಿ, ಗೌಡಹಳ್ಳಿ ಶಿವಕುಮಾರ್, ಅಪ್ಪು ಟೀಮ್ ರಾಜೇಶ್, ಮುಖಂಡ ನಿಶಾಂತ್, ತೋಟೇಶ್, ಮಹದೇವ ಪ್ರಸಾದ್, ದೇವಾಂಗಪೇಟೆ ಅಚ್ಗಾಲ್ ನಾಗರಾಜಯ್ಯ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.