
ಗುಂಡ್ಲುಪೇಟೆ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ(ಟಿ.ಎ.ಪಿ.ಸಿ.ಎಂ.ಎಸ್)ದ ಅಧ್ಯಕ್ಷರಾಗಿ ಜಿ.ಮಡಿವಾಳಪ್ಪ, ಉಪಾಧ್ಯಕ್ಷರಾಗಿ ಗೋಕುಲಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು.
ಟಿ.ಎ.ಪಿ.ಸಿ.ಎಂ.ಎಸ್. ಆವರಣದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಬೆಂಬಲಿತರಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿದ್ದು, ಚುನಾವಣಾಧಿಕಾರಿ ತಹಶೀಲ್ದಾರ್ ಎಂ.ಎಸ್.ತನ್ಮಯ್ ಅವಿರೋಧ ಆಯ್ಕೆ ಘೋಷಿಸಿದರು.
11 ಮಂದಿ ಸದಸ್ಯರು ಮತ್ತು ನಾಮ ನಿರ್ದೇಶನಗೊಂಡ ಒಬ್ಬರು, ಎಆರ್ 1 ಮತ್ತು ಇಬ್ಬರು ಬಿಜೆಪಿ ಬೆಂಬಲಿತರನ್ನು ಒಳಗೊಂಡು 14 ಮಂದಿ ಮತ ಚಲಾಯಿಸುವ ಅವಕಾಶವಿತ್ತು. ಆದರೆ ಎಲ್ಲರೂ ಅವಿರೋಧ ಆಯ್ಕೆಗೆ ಸಹಮತ ವ್ಯಕ್ತಪಡಿಸಿದ್ದರಿಂದ ಆಯ್ಕೆ ಸುಗಮವಾಗಿ ನಡೆಯಿತು.
ನಿರ್ದೇಶಕರಾದ ಎನ್.ಪ್ರದೀಪ್‍ಕುಮಾರ್, ಎಸ್.ಶಿವನಾಗಪ್ಪ, ಕೆ.ಮಹದೇವಸ್ವಾಮಿ, ಶಿವನಂಜಪ್ಪ, ಎಲ್.ಮಹೇಶ್ವರಿ, ಆರ್.ಜಯರಾಮ್, ಎನ್.ರವೀಂದ್ರ, ಎ.ಎಸ್.ಸೋಮಶೇಖರ್, ಚಿಕ್ಕತಾಯಮ್ಮ, ಜಯರಾಜ್, ಪಕ್ಷದ ಮುಖಂಡರಾದ ಬಿ.ಎಂ.ಮುನಿರಾಜು, ಪಿ.ಬಿ.ರಾಜಶೇಖರ್, ಮೊಳ್ಳಯ್ಯನಹುಂಡಿ ಬಸವರಾಜು, ಆರ್.ಎಸ್.ನಾಗರಾಜು, ನಾಗೇಶ್ ರಾಘವಾಪುರ, ಮಹೇಶ್‍ಚಿಕ್ಕಾಟಿ, ಮಂಚಹಳ್ಳಿ ಲೋಕೇಶ್, ಪ್ರಭುಸ್ವಾಮಿ ಕರಕಲಮಾದಹಳ್ಳಿ, ನಾಗಪ್ಪ ವಡ್ಡಗೆರೆ, ಪರಮೇಶ್ವರಪ್ಪ ಅಂಕಹಳ್ಳಿ , ಕಾಂಗ್ರೆಸ್ ಪ್ರಮುಖರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.