
ಸಂತೇಮರಹಳ್ಳಿ: ಸಂಚಾರ ಸುರಕ್ಷತೆ ಅಂಗವಾಗಿ ಇಲ್ಲಿನ ಬಸ್ ನಿಲ್ದಾಣದ ಬಳಿ ವಾಹನ ಸವಾರರಿಗೆ ವಿದ್ಯಾರ್ಥಿಗಳು ಈಚೆಗೆ ಗುಲಾಬಿ ಹೂವು ನೀಡಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ಜಾಗೃತಿ ಮೂಡಿಸಿದರು.
ಸರ್ಕಲ್ ಇನ್‌ಸ್ಪೆಕ್ಟರ್ ಸಾಗರ್ ಮಾತನಾಡಿ, ‘ವಾಹನ ಸವಾರರು ಸಂಚಾರ ನಿಯಮಗಳನ್ನು ಪಾಲಿಸಬೇಕು. ನಿಮ್ಮನ್ನು ನಂಬಿರುವ ಕುಟುಂಬಗಳು ತಬ್ಬಲಿಯಾಗುತ್ತಾರೆ. ಜನಸಂದಣಿ ಸ್ಥಳದಲ್ಲಿ ನಿಧಾನಗತಿಯಲ್ಲಿ ವಾಹನ ಚಲಾಯಿಸಬೇಕು. ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿದರರೆ, ಅಪಘಾತವಾದಾಗ ತಲೆಗೆ ಪೆಟ್ಟು ಬಿದ್ದು ಉಂಟಾಗುವ ಸಾವಿನ ಸಾಧ್ಯತೆ ಕಡಿಮೆಯಾಗುತ್ತದೆ. ಈಚಿನ ದಿನಗಳಲ್ಲಿ ಯುವಕರು ಅತಿಯಾದ ವೇಗದಿಂದ ವಾಹನ ಚಲಾಯಿಸಿ ಅಪಘಾತ ಮಾಡಿಕೊಳ್ಳುತ್ತಿದ್ದಾರೆ. ಪಾನಮತ್ತರಾಗಿ ವಾಹನ ಚಲಾಯಿಸಬಾರದು. ವಾಹನ ಚಲಾಯಿಸುವಾಗ ಮೊಬೈಲ್ ಬಳಸಬಾರದು’ ಎಂದು ತಿಳಿಸಿದರು.
ಎಎಸ್‌ಐ ಉಮೇಶ್, ಪೊಲೀಸ್ ಸಿಬ್ಬಂದಿ ರಮೇಶ್, ಎಂ.ಆರ್.ಮಹದೇವಸ್ವಾಮಿ, ಹೇಮಂತ್, ಯಶವಂತ್ ಕುಮಾರ್, ಬಸವಣ್ಣ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.