ಕೊಳ್ಳೇಗಾಲ: ಮಂಗಳವಾರ ರಾತ್ರಿಯಿಂದ ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯದಿಂದ 2 ಲಕ್ಷಕ್ಕೂ ಹೆಚ್ಚು ಕ್ಯುಸೆಕ್ ನೀರನ್ನು ಬಿಟ್ಟ ಪರಿಣಾಮ ಹಲವು ಗ್ರಾಮಗಳು ಮುಳುಗಡೆಯಾಗುವ ಸಾಧ್ಯತೆ ಇರುವುದರಿಂದ ಈಗಾಗಲೇ ದಾಸನಪುರ ಗ್ರಾಮದಿಂದ 173 ಮಂದಿಯನ್ನು ಮಂಗಳವಾರ ರಾತ್ರಿ ಕೊಳ್ಳೇಗಾಲದ ಮಹದೇಶ್ವರ ಹಾಸ್ಟೆಲ್‌ನಲ್ಲಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.
ತಾಲ್ಲೂಕಿನ ಕಾವೇರಿ ನದಿ ಪಾತ್ರದ ಗ್ರಾಮಗಳಿಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಬುಧವಾರ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ತುಂಬಿದರು. ತಾಲ್ಲೂಕಿನ ಮುಳ್ಳೂರು, ದಾಸನಪುರ, ಹಳೇ ಅಣಗಳ್ಳಿ, ಹಳೇ ಹಂಪಾಪುರ, ಹರಳೆ ಗ್ರಾಮಸ್ಥರ ಜೊತೆ ಕೆಲಕಾಲ ಮಾತುಕತೆ ನಡೆಸಿದರು.
‘ಗ್ರಾಮಸ್ಥರು ಯಾರು ಸಹ ಭಯಪಡುವ ಅಗತ್ಯವಿಲ್ಲ, ನಿಮ್ಮ ಜೊತೆ ಸದಾ ನಾವು ಹಾಗೂ ಅಧಿಕಾರಿಗಳು ಇರುತ್ತೇವೆ. ನೀರಿನ ಹರಿವು ಹೆಚ್ಚಾದ ಕಾರಣ ಗ್ರಾಮಗಳು ಮುಳುಗಡೆಯಾಗುತ್ತವೆ. ಆದಕಾರಣ ಗ್ರಾಮಸ್ಥರು ಕಾಳಜಿ ಕೇಂದ್ರಕ್ಕೆ ತೆರಳಬೇಕಾಗುತ್ತದೆ. ಈಗಾಗಲೇ ದಾಸನಪುರ ಗ್ರಾಮದಿಂದ 173 ಮಂದಿಯನ್ನು ಕಾಳಜಿ ಕೇಂದ್ರಕ್ಕೆ ಜನರನ್ನು ಸ್ಥಳಾಂತರ ಮಾಡಲಾಗಿದೆ. ಕೆಲವರು ಇನ್ನೂ ಗ್ರಾಮವನ್ನು ತೊರೆದಿಲ್ಲ ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ನೀರಿನ ಹರಿವು ಇಳಿಮುಖ ಆಗುವವರೆಗೂ ಕಾಳಜಿ ಕೇಂದ್ರದಲ್ಲಿ ಇರಬೇಕು ನೀರು ಕಡಿಮೆಯಾದ ತಕ್ಷಣ ನಿಮ್ಮ ನಿಮ್ಮ ಗ್ರಾಮಕ್ಕೆ ಹೋಗಬಹುದು. ಹಾಗಾಗಿ ಎಲ್ಲರೂ ಕಾಳಜಿ ಕೇಂದ್ರಕ್ಕೆ ಹೋಗಬೇಕು ಎಂದು ದಾಸನಪುರ ಗ್ರಾಮಸ್ಥರಿಗೆ ಮನವಿ ಮಾಡಿದರು. ಇದಕ್ಕೆ ಗ್ರಾಮಸ್ಥರು ‘ನೀರು ಹೆಚ್ಚಾದರೆ ನಾವು ಕಾಳಜಿ ಕೇಂದ್ರಕ್ಕೆ ಹೋಗುತ್ತೇವೆ’ ಎಂದು ಹೇಳಿದರು.
ಭಾನುವಾರ ಹಾಗೂ ಸೋಮವಾರ ನೀರಿನ ಹರಿವು ಕಡಿಮೆಯಾದ ಕಾರಣ ಗ್ರಾಮಸ್ಥರು ಈ ಬಾರಿ ಪ್ರವಾಹ ಆಗುವುದಿಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದರು. ಆದರೆ, ಮಂಗಳವಾರ ನೀರು ಹೆಚ್ಚಾದ ಕಾರಣ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಬೇಕಾಯಿತು. ನೀರಿನ ಹರಿವು ಹೆಚ್ಚಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎಂಬ ಕಾರಣಕ್ಕೆ ರಾತ್ರಿಯೆಲ್ಲ ಅಧಿಕಾರಿಗಳು ಗ್ರಾಮದಲ್ಲೇ ವಾಸ್ತವ್ಯ ಹೂಡಿದ್ದಾರೆ.
‘ಕಾಳಜಿ ಕೇಂದ್ರದಲ್ಲಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ವಾರ್ಡ್‌ಗಳನ್ನು ನೀಡಲಾಗಿದೆ. ಮೂಲ ಸೌಕರ್ಯ ಸೇರಿದಂತೆ ಉತ್ತಮ ಗುಣಮಟ್ಟದ ಆಹಾರ ನೀಡುತ್ತಿದ್ದು, ಗ್ರಾಮಸ್ಥರು ಯಾರು ಸಹ ಭಯಪಡುವಂತಿಲ್.ಲ ಅಧಿಕಾರಿಗಳು ಸದಾ ನಿಮ್ಮ ಜೊತೆಯಲ್ಲಿ ಇರುತ್ತಾರೆ’ ಎಂದು ಗ್ರಾಮಸ್ಥರಿಗೆ ಉಪ ವಿಭಾಗಾಧಿಕಾರಿ ಮಹೇಶ್ ಧೈರ್ಯ ತುಂಬಿದರು.
ದಾಸನಪುರ ರಕ್ಷಣೆಗೆ ತಡೆಗೋಡೆ: ಭರವಸೆ
ಕಾಳಜಿ ಕೇಂದ್ರಕ್ಕೆ ಶಾಸಕ ಕೃಷ್ಣಮೂರ್ತಿ ಭೇಟಿ ನೀಡಿ ಒಂದು ಗಂಟೆಗೂ ಹೆಚ್ಚು ಕಾಲ ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿದರು.
‘ನಿಮ್ಮ ಗ್ರಾಮಕ್ಕೆ ಶಾಶ್ವತ ತಡೆಗೋಡೆಯನ್ನು ಮಾಡಿಸುತ್ತೇನೆ. ಈಗಾಗಲೇ ಚಳಿಗಾಲದ ಅಧಿವೇಶನದಲ್ಲಿ ನಾನು ದಾಸನಪುರ ಗ್ರಾಮದಲ್ಲಿ 8 ಕಿ.ಮೀ ತಡೆಗೋಡೆ ನಿರ್ಮಾಣ ಮಾಡಬೇಕು ಎಂಬ ಪ್ರಸ್ತಾವ ಸಲ್ಲಿಸಿದ್ದೇನೆ. ಹಾಗಾಗಿ ತಡೆಗೋಡೆಗಾಗಿ ₹ 150 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆ ಮಾಡಲು ಮನವಿ ಮಾಡಿಕೊಂಡಿದ್ದೇನೆ. ಮುಖ್ಯಮಂತ್ರಿಗಳು ಇದರ ಬಗ್ಗೆ ಕಾಳಜಿ ವಹಿಸಿ ಆದಷ್ಟು ಬೇಗನೆ ಅನುದಾನವನ್ನು ಬಿಡುಗಡೆ ಮಾಡುವ ಭರವಸೆ ಇದೆ’ ಎಂದರು.
‘ಮುಂದಿನ ದಿನಗಳಲ್ಲಿ ಕಾವೇರಿ ನದಿಗೆ ಶಾಶ್ವತ ತಡೆಗೋಡೆಯನ್ನು ನಿರ್ಮಿಸುತ್ತೇನೆ. ಪ್ರವಾಹ ಬಂದು ಗ್ರಾಮದಲ್ಲಿ ಮನೆ, ವ್ಯವಸಾಯದ ಬೆಳೆಗಳು ಸೇರಿದಂತೆ ಅನೇಕ ವಸ್ತುಗಳು ಹಾಳಾದರೆ ಸೂಕ್ತ ಪರಿಹಾರ ನೀಡಲಾಗುತ್ತದೆ. ಯಾರೂ ಭಯಪಡುವ ಅಗತ್ಯವಿಲ್ಲ. ಹಾಗಾಗಿ ಪ್ರವಾಹ ನಿಲ್ಲುವವರೆಗೂ ಕಾಳಜಿ ಕೇಂದ್ರದಲ್ಲಿ ಇರಬೇಕು’ ಎಂದದು ಹೇಳಿದರು.
‘ಕಾಳಜಿ ಕೇಂದ್ರದಲ್ಲಿ ಇರುವ ಗ್ರಾಮಸ್ಥರಿಗೆ ಸರಿಯಾಗಿ ಊಟ ತಿಂಡಿ ಸೇರಿದಂತೆ ಅನೇಕ ಮೂಲ ಸೌಕರ್ಯಗಳನ್ನು ನೀಡಬೇಕು. ಯಾರಿಗೂ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಮಹೇಶ್, ತಹಶೀಲ್ದಾರ್ ಮಂಜುಳಾ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಡಿ.ವೈ.ಎಸ್.ಪಿ. ಧರ್ಮೇಂದ್ರ, ಗ್ಯಾರೆಂಟಿ ಯೋಜನೆಗಳ ಜಿಲ್ಲಾ ಅಧ್ಯಕ್ಷ ಎಚ್.ವಿ.ಚಂದ್ರು, ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ತಾಲೂಕು ಆಡಳಿತ ಅಧಿಕಾರಿ ವರ್ಗದವರು, ಸ್ಥಳೀಯ ಜನಪ್ರತಿನಿಧಿಗಳು ಮುಂತಾದ ಪ್ರಮುಖರು ಹಾಜರಿದ್ದರು.
ಪ್ರವಾಸಿ ತಾಣಗಳು ಬಂದ್...
ಕೇರಳದ ವಯನಾಡ್‌ಲ್ಲಿ ಭೂಕುಸಿತ ಹಾಗೂ ಭಾರಿ ಮಳೆಯಾಗುತ್ತಿರುವ ಕಾರಣ ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯಗಳಿಂದ ನದಿಗೆ ಹೆಚ್ಚು ಪ್ರಮಾಣದಲ್ಲಿ ನೀರನ್ನು ಬಿಡಲಾಗಿದೆ. ಹಾಗಾಗಿ ಪ್ರವಾಸಿಗರು ನದಿ ತೀರ ಹಾಗೂ ಜಲಪಾತ ವೀಕ್ಷಣೆ ಮಾಡುತ್ತಾರೆ. ಆದಕಾರಣ ಮುಂಜಾಗ್ರತಾ ಕ್ರಮವಾಗಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಪ್ರವಾಸಿ ತಾಣಗಳನ್ನು ಬಂದ್ ಮಾಡಿಸಿದ್ದಾರೆ. ತಾಲ್ಲೂಕಿನ ವೆಲ್ಲೆಸ್ಲಿ ಸೇತುವೆ ಶಿವನಸಮುದ್ರ ದರ್ಗಾ ಭರಚುಕ್ಕಿ ಜಲಪಾತ ಹಾಗೂ ಹನೂರು ತಾಲ್ಲೂಕಿನ ಹೊಗೆನಕಲ್ ಜಲಪಾತ ತೀರಿದಂತೆ ಅನೇಕ ಪ್ರವಾಸಿ ತಾಣಗಳನ್ನು ಬಂದ್ ಮಾಡಿದ್ದಾರೆ. ಪ್ರವಾಸಿಗರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಸಲುವಾಗಿ ಅನೇಕ ಅಪಘಾತಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಆ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ಹಿತಕರ ಘಟನೆಗಳು ನಡೆಯಬಾರದು ಎಂದು ಬುಧವಾರದಿಂದ ಶುಕ್ರವಾರದವರೆಗೂ ತಾತ್ಕಾಲಿಕವಾಗಿ ಬಂದ್ ಮಾಡಿ ಆದೇಶ ಹೊರಡಿಸಿದ್ದಾರೆ.
ಕೊಳ್ಳೇಗಾಲ ತಾಲ್ಲೂಕಿನ ಕಾವೇರಿ ನದಿ ಪಾತ್ರದ ಗ್ರಾಮಗಳಿಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಬುಧವಾರ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ತುಂಬಿದರು. ತಾಲ್ಲೂಕಿನ ಮುಳ್ಳೂರು ದಾಸನಪುರ ಹಳೇ ಅಣಗಳ್ಳಿ ಹಳೇ ಹಂಪಾಪುರ ಹರಳೆ ಗ್ರಾಮಸ್ಥರ ಜೊತೆ ಕೆಲಕಾಲ ಮಾತುಕತೆ ನಡೆಸಿದರು. ಮಂಗಳವಾರ ರಾತ್ರಿಯಿಂದ ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯದಿಂದ 2 ಲಕ್ಷಕ್ಕೂ ಹೆಚ್ಚು ಕ್ಯುಸೆಕ್ ನೀರನ್ನು ಬಿಟ್ಟ ಪರಿಣಾಮ ಹಲವು ಗ್ರಾಮಗಳು ಮುಳುಗಡೆಯಾಗುವ ಸಾಧ್ಯತೆಯಿದೆ ಹಾಗಾಗಿ ಗ್ರಾಮಸ್ಥರು ಯಾರು ಸಹ ಭಯಪಡುವ ಅಗತ್ಯವಿಲ್ಲ. ನಿಮ್ಮ ಜೊತೆ ಸದಾ ನಾವು ಇರುತ್ತೇವೆ ಹಾಗೂ ಅಧಿಕಾರಿಗಳು ಇರುತ್ತಾರೆ. ನೀರಿನ ಹರಿವು ಹೆಚ್ಚಾದ ಕಾರಣ ಗ್ರಾಮಗಳು ಮುಳುಗಡೆಯಾಗುತ್ತವೆ ಆ ಕಾರಣ ಗ್ರಾಮಸ್ಥರು ಕಾಳಜಿ ಕೇಂದ್ರಕ್ಕೆ ತೆರಳಬೇಕಾಗುತ್ತದೆ. ಈಗಾಗಲೇ ದಾಸನಪುರ ಗ್ರಾಮದಿಂದ 173 ಮಂದಿಯನ್ನು ಮಂಗಳವಾರ ರಾತ್ರಿ ಕೊಳ್ಳೇಗಾಲದ ಮಹದೇಶ್ವರ ಹಾಸ್ಟೆಲ್‌ನಲ್ಲಿರುವ ಕಾಳಜಿ ಕೇಂದ್ರಕ್ಕೆ ಜನರನ್ನು ಸ್ಥಳಾಂತರ ಮಾಡಲಾಗಿದೆ. ಕೆಲವರು ಇನ್ನೂ ಗ್ರಾಮವನ್ನು ತೊರೆದಿಲ್ಲ ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ನೀರಿನ ಹರಿವು ಇಳಿಮುಖ ಆಗುವವರೆಗೂ ಕಾಳಜಿ ಕೇಂದ್ರದಲ್ಲಿ ಇರಬೇಕು ನೀರು ಕಡಿಮೆಯಾದ ತಕ್ಷಣ ನಿಮ್ಮ ನಿಮ್ಮ ಗ್ರಾಮಕ್ಕೆ ಹೋಗಬಹುದು ಹಾಗಾಗಿ ಎಲ್ಲರೂ ಕಾಳಜಿ ಕೇಂದ್ರಕ್ಕೆ ಹೋಗಬೇಕು ಎಂದು ದಾಸನಪುರ ಗ್ರಾಮಸ್ಥರಿಗೆ ಮನವಿ ಮಾಡಿದರು. ಇದಕ್ಕೆ ಗ್ರಾಮಸ್ಥರು ನೀರು ಹೆಚ್ಚಾದರೆ ನಾವು ಕಾಳಜಿ ಕೇಂದ್ರಕ್ಕೆ ಹೋಗುತ್ತೇವೆ ಎಂದು ಹೇಳಿದರು. .
173 ಮಂದಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ....
ಭಾನುವಾರ ಹಾಗೂ ಸೋಮವಾರ ನೀರಿನ ಹರಿವು ಕಡಿಮೆಯಾದ ಕಾರಣ ಗ್ರಾಮಸ್ಥರು ಈ ಬಾರಿ ಪ್ರವಾಹ ಆಗುವುದಿಲ್ಲ ಎಂದು ನಿಟ್ಟುಸಿರು ಬಿಟ್ಟಿದರು. ಆದರೆ ಮಂಗಳವಾರ ನೀರು ಹೆಚ್ಚಾದ ಕಾರಣ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಬೇಕಾಯಿತು. ಮಂಗಳವಾರ ರಾತ್ರಿ ಉಪ ವಿಭಾಗಾಧಿಕಾರಿ ಮಹೇಶ್ ನೇತೃತ್ವದಲ್ಲಿ ದಾಸನಪುರ ಗ್ರಾಮದಿಂದ 173 ಮಂದಿಯನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಯಿತು. ನೀರಿನ ಹರಿವು ಹೆಚ್ಚಾಗುತ್ತಿರುವ ಹಿನ್ನೆಲೆ ಮುಂಜಾಗ್ರತ ಕ್ರಮವಾಗಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎಂಬ ಕಾರಣಕ್ಕೆ ರಾತ್ರಿಯೆಲ್ಲ ಅಧಿಕಾರಿಗಳು ಗ್ರಾಮದಲ್ಲೇ ವಾಸ್ತವ್ಯ ಹೂಡಿ 173 ಮಂದಿಯನ್ನು ಸ್ಥಳಾಂತರಿಸಿದ್ದರು. ಇನ್ನು ಕೆಲವರು ಗ್ರಾಮವನ್ನು ತೊರೆದಿಲ್ಲ ನೀರಿನ ಹರಿವು ಹೆಚ್ಚಾಗುವ ಸಾಧ್ಯತೆ ಇದೆ ಹಾಗಾಗಿ ಅಧಿಕಾರಿಗಳು ಗ್ರಾಮದಲ್ಲೇ ವಾಸ್ತವ ಹೂಡಿದ್ದಾರೆ. ಕಾಳಜಿ ಕೇಂದ್ರದಲ್ಲಿ ಪ್ರತ್ಯೇಕವಾಗಿ ಮಹಿಳೆಯರಿಗೆ ಹಾಗೂ ಪುರುಷರಿಗೆ ವಾರ್ಡ್ಗಳನ್ನು ನೀಡಿದ್ದಾರೆ. ಮೂಲಭೂತ ಸೌಕರ್ಯ ಸೇರಿದಂತೆ ಉತ್ತಮವಾದ ಗುಣಮಟ್ಟದ ಆಹಾರಗಳನ್ನು ನೀಡುತ್ತಿದ್ದಾರೆ ಅದಲ್ಲದೆ ಗ್ರಾಮಸ್ಥರು ಯಾರು ಸಹ ಭಯಪಡುವಂತಿಲ್ಲ ಅಧಿಕಾರಿಗಳು ಸದಾ ನಿಮ್ಮ ಜೊತೆಯಲ್ಲಿ ಇರುತ್ತಾರೆ ಎಂದು ಗ್ರಾಮಸ್ಥರಿಗೆ ಉಪ ವಿಭಾಗಾಧಿಕಾರಿ ಮಹೇಶ್ ಧೈರ್ಯ ತುಂಬಿದರು.
ಶಾಸಕ ಕೃಷ್ಣಮೂರ್ತಿ ಕಾಳಜಿ ಕೇಂದ್ರಕ್ಕೆ ಭೇಟಿ....
ದಾಸನಪುರ ಗ್ರಾಮದ 173 ಮಂದಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ವಾಗಿದ್ದಾರೆ. ಹಾಗಾಗಿ ಶಾಸಕ ಕೃಷ್ಣಮೂರ್ತಿಯವರು ಭೇಟಿ ನೀಡಿ ಒಂದು ಗಂಟೆಗೂ ಹೆಚ್ಚು ಕಾಲ ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿದರು. ನಿಮ್ಮ ಗ್ರಾಮಕ್ಕೆ ಶಾಶ್ವತ ತಡೆಗೋಡೆಯನ್ನು ಮಾಡಿಸುತ್ತೇನೆ. ಈಗಾಗಲೇ ಚಳಿಗಾಲದ ಅಧಿವೇಶನದಲ್ಲಿ ನಾನು ದಾಸನಪುರ ಗ್ರಾಮದಲ್ಲಿ 8 ಕಿ.ಮೀ ತಡೆಗೋಡೆ ನಿರ್ಮಾಣ ಮಾಡಬೇಕು ಎಂಬುದಾಗಿ ಪ್ರಸ್ತಾವನೆಯನ್ನು ಸಲ್ಲಿಸಿದ್ದೇನೆ ಹಾಗಾಗಿ ತಡೆಗೋಡೆಗಾಗಿ 150 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾನೆ. ಮುಖ್ಯಮಂತ್ರಿಗಳು ಇದರ ಬಗ್ಗೆ ಕಾಳಜಿ ವಹಿಸಿ ಆದಷ್ಟು ಬೇಗನೆ ಅನುದಾನವನ್ನು ಬಿಡುಗಡೆ ಮಾಡುವ ಭರವಸೆ ಇದೆ. ಆ ಕಾರಣ ಮುಂದಿನ ದಿನಗಳಲ್ಲಿ ಕಾವೇರಿ ನದಿಗೆ ಶಾಶ್ವತ ತಡೆಗೋಡೆಯನ್ನು ನಿರ್ಮಿಸುತ್ತೇನೆ. ಪ್ರವಾಹ ಬಂದು ಗ್ರಾಮದಲ್ಲಿ ಮನೆ ವ್ಯವಸಾಯದ ಬೆಳೆಗಳು ಸೇರಿದಂತೆ ಅನೇಕ ವಸ್ತುಗಳು ಹಾಳಾದರೆ ಸೂಕ್ತ ಪರಿಹಾರ ನೀಡಲಾಗುತ್ತದೆ ಯಾರು ಭಯಪಡುವ ಅಗತ್ಯವಿಲ್ಲ ಹಾಗಾಗಿ ಪ್ರವಾಹ ನಿಲ್ಲುವವರೆಗೂ ಕಾಳಜಿ ಕೇಂದ್ರದಲ್ಲಿ ಇರಬೇಕು ಎಂದರು. ಕಾಳಜಿ ಕೇಂದ್ರದಲ್ಲಿ ಇರುವ ಗ್ರಾಮಸ್ಥರಿಗೆ ಸರಿಯಾಗಿ ಊಟ ತಿಂಡಿ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳನ್ನು ನೀಡಬೇಕು.ಉತ್ತಮ ಹಾಗೂ ಗುಣಮಟ್ಟದ ಆಹಾರವನ್ನು ನೀಡಬೇಕು ಯಾರಿಗೂ ಯಾವುದೇ ತೊಂದರೆ ಆಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರವಾಸಿ ತಾಣಗಳು ಬಂದ್....
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.