ADVERTISEMENT

ಹನೂರು | ನಕ್ಷತ್ರ ಆಮೆ ಮಾರಾಟ ಯತ್ನ: ಮೂವರು ಸೆರೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2024, 13:03 IST
Last Updated 13 ಸೆಪ್ಟೆಂಬರ್ 2024, 13:03 IST
ವಶಪಡಿಸಿಕೊಂಡಿರುವ ನಕ್ಷತ್ರ ಆಮೆಗಳು
ವಶಪಡಿಸಿಕೊಂಡಿರುವ ನಕ್ಷತ್ರ ಆಮೆಗಳು   

ಹನೂರು: ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆಗಳನ್ನು ಮಾರಲು ಯತ್ನಿಸುತ್ತಿದ್ದ ಮೂವರನ್ನು ಅರಣ್ಯ ಇಲಾಖೆ ಸಂಚಾರಿ ದಳದ ಸಿಬ್ಬಂದಿ ಬುಧವಾರ ಬಂಧಿಸಿದ್ದಾರೆ.

ಹನೂರು ತಾಲ್ಲೂಕಿನ ಗುಂಡಿಮಾಳದ ಪ್ರಕಾಶ್, ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಮಾಗನೂರಿನ‌ ನಾಗೇಂದ್ರ ಸ್ವಾಮಿ, ರಾಗಿಬೊಮ್ಮನಹಳ್ಳಿ ನಿವಾಸಿ ನಾಗರಾಜು ಬಂಧಿತರು.

ಗುಂಡಿಮಾಳದ ಮೂಲಕ ನಕ್ಷತ್ರ ಆಮೆಗಳನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಅರಣ್ಯ ಸಂಚಾರಿ ದಳದ ಅಧಿಕಾರಿ ವಿಜಯರಾಜ್ ನೇತೃತ್ವದ ತಂಡ ದಾಳಿ ನಡೆಸಿ 1 ಕೆಜಿ 280 ಗ್ರಾಂ ತೂಗುವ ಎರಡು ನಕ್ಷತ್ರ ಆಮೆಗಳನ್ನು ವಶಕ್ಕೆ ಪಡೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.