ADVERTISEMENT

ಯಳಂದೂರು | ಉದ್ಘಾಟನೆಯಾಗದ ತ್ಯಾಜ್ಯ ವಿಲೇವಾರಿ ಘಟಕ: ವಸ್ತುಗಳು ಕಳ್ಳರ ಪಾಲು

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2023, 14:27 IST
Last Updated 6 ನವೆಂಬರ್ 2023, 14:27 IST
ಯಳಂದೂರು ತಾಲ್ಲೂಕಿನ ಆಮೆಕೆರೆ ರಸ್ತೆಯಲ್ಲಿ ನಿರ್ಮಾಣವಾಗಿರುವ ಘನ ತ್ಯಾಜ್ಯ ಘಟಕದ ಸೀಟ್ ವಾಲ್ ಕಳ್ಳರ ಪಾಲಾಗಿವೆ.
ಯಳಂದೂರು ತಾಲ್ಲೂಕಿನ ಆಮೆಕೆರೆ ರಸ್ತೆಯಲ್ಲಿ ನಿರ್ಮಾಣವಾಗಿರುವ ಘನ ತ್ಯಾಜ್ಯ ಘಟಕದ ಸೀಟ್ ವಾಲ್ ಕಳ್ಳರ ಪಾಲಾಗಿವೆ.   

ಯಳಂದೂರು: ವರ್ಷದ ಹಿಂದೆ ನಿರ್ಮಾಣ ಮಾಡಿ ಇನ್ನೂ ಉದ್ಘಾಟನಾ ಭಾಗ್ಯ ಕಾಣದ ಗೌಡಹಳ್ಳಿ ಪಂಚಾಯತಿ ವ್ಯಾಪ್ತಿಯ ಘನ ತ್ಯಾಜ್ಯ ನಿರ್ವಹಣಾ ಘಟಕದ ಬೆಲೆಬಾಳುವ ವಸ್ತುಗಳು ಒಂದೊಂದೇ ಕಳ್ಳರ ಪಾಲಾಗುತ್ತಿವೆ.

ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಗ್ರಹಿಸುವ ಕಸವನ್ನು ಸಂಸ್ಕರಿಸುವ ಉದ್ದೇಶದಿಂದ ಘಟಕ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಲಕ್ಷಾಂತರ ರೂಪಾಯಿ ವೆಚ್ಚವಾಗಿದೆ. ಆದರೆ, ತ್ಯಾಜ್ಯದ ಸಂಸ್ಕರಣೆಗೆ ಬಳಕೆಯಾಗಿಲ್ಲ. ಹಾಗಾಗಿ, ಕಳ್ಳರು ಘಟಕಕ್ಕೆ ಅಳವಡಿಸಿದ್ದ ಶೀಟ್ ಮತ್ತು ಕಬ್ಬಿಣದ ಸಲಾಕೆಗಳನ್ನು ಬಿಚ್ಚುತ್ತಿದ್ದು, ಘಟಕವೇ ಮರೆಯಾಗುವ ಹಂತದಲ್ಲಿ ಇದೆ.

ಘಟಕ ರಸ್ತೆಗೆ ಹೊಂದಿಕೊಂಡಿದೆ. ಪ್ರತಿದಿನ ಆಗಂತುಕರು ಸೀಟ್ ಬಿಚ್ಚಿ ವಾಹನಗಳಲ್ಲಿ ತುಂಬಿಕೊಂಡು ಪರಾರಿಯಾಗುತ್ತಿದ್ದಾರೆ. ಇದರ ಮೇಲ್ವಿಚಾರಣೆ ಮತ್ತು ನಿರ್ವಹಣೆಯನ್ನು ಪಂಚಾಯಿತಿ ಮಾಡುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಸುಳಿದಿಲ್ಲ ಎಂದು ಆಮೆಕೆರೆ ಕೃಷಿಕ ನಂಜೇಗೌಡ ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.