ADVERTISEMENT

ಶುದ್ಧ ನೀರು ಬಳಕೆ ಆರೋಗ್ಯಕ್ಕೆ ಹಿತ:ಶಾಸಕ ಎ.ಆರ್.ಕೃಷ್ಣಮೂರ್ತಿ

ಶುದ್ಧ ನೀರಿ‌ನ ಘಟಕ ನಿರ್ಮಾಣಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 14:27 IST
Last Updated 2 ಮಾರ್ಚ್ 2024, 14:27 IST
ಯಳಂದೂರು ತಾಲ್ಲೂಕಿನ ಉಪ್ಪಿನಮೋಳೆ ಗ್ರಾಮದಲ್ಲಿ ಶನಿವಾರ ಶುದ್ಧ ನೀರಿ‌ನ ಘಟಕ ನಿರ್ಮಾಣ ಕಾಮಗಾರಿಗೆ  ಶಾಸಕ ರಾದ ಎ.ಆರ್.ಕೃಷ್ಣಮೂರ್ತಿ ಹಾಗೂ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು. ಗ್ರಾಮಪಂಚಾಯಿತಿ ಅಧ್ಯಕ್ಷೆ ಮೀನಾ, ಸದಸ್ಯರು  ಭಾಗವಹಿಸಿದ್ದರು.
ಯಳಂದೂರು ತಾಲ್ಲೂಕಿನ ಉಪ್ಪಿನಮೋಳೆ ಗ್ರಾಮದಲ್ಲಿ ಶನಿವಾರ ಶುದ್ಧ ನೀರಿ‌ನ ಘಟಕ ನಿರ್ಮಾಣ ಕಾಮಗಾರಿಗೆ  ಶಾಸಕ ರಾದ ಎ.ಆರ್.ಕೃಷ್ಣಮೂರ್ತಿ ಹಾಗೂ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು. ಗ್ರಾಮಪಂಚಾಯಿತಿ ಅಧ್ಯಕ್ಷೆ ಮೀನಾ, ಸದಸ್ಯರು  ಭಾಗವಹಿಸಿದ್ದರು.   

ಯಳಂದೂರು: ಪ್ರತಿಯೊಬ್ಬರೂ ಶುದ್ಧ ನೀರು ಬಳಸಿ, ಆರೋಗ್ಯವನ್ನು ಸುಸ್ಥಿಯಲ್ಲಿ ಇಟ್ಟುಕೊಳ್ಳಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ಉಪ್ಪಿನಮೋಳೆ ಗ್ರಾಮದಲ್ಲಿ ಶನಿವಾರ ₹12.50 ಲಕ್ಷ ವೆಚ್ಚದ ಶುದ್ಧ ನೀರಿ‌ನ ಘಟಕ ನಿರ್ಮಾಣ ಕಾಮಗಾರಿಗೆ ಚಾಲನೆನೀಡಿ ಅವರು ಮಾತನಾಡಿದರು.  ಪಂಚಾಯಿತಿ ಘಟಕದ ಸಣ್ಣಪುಟ್ಟ ಸಮಸ್ಯೆಗಳನ್ನು ನಿರ್ವಹಣೆ ಮಾಡಿದರೆ ಶುದ್ಧ ನೀರು ಪೂರೈಕೆಯಾಗುತ್ತದೆ ಎಂದರು.

ಗ್ರಾಮಪಂಚಾಯಿತಿ ಅಧ್ಯಕ್ಷೆ ಮೀನಾ, ಸದಸ್ಯರಾದ ಪುಟ್ಟಮಾದೇವ್, ಕೆ.ಮಾದೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರು, ಮುಖಂಡರಾದ ರಂಗಸ್ವಾಮಿ, ಬಲ್ಲಶೆಟ್ಟಿ, ಮಹದೇವಶೆಟ್ಟಿ, ಪುಟ್ಟಸ್ವಾಮಿ, ಗೋವಿಂದಶೆಟ್ಟಿ, ರಂಗಸ್ವಾಮಿ, ರಾಜಣ್ಣ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.