ಯಳಂದೂರು: ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಭಾನುವಾರ ರಾತ್ರಿ ಮೈಸೂರಿನ ನಿರಂತರ ಕಲಾ ವೇದಿಕೆಯ ಜಗ್ಗು ಜಾದೂಗರ್, ಮಿಮಿಕ್ರಿ ಕಲಾವಿದ ರವಿಕುಮಾರ್ ನಡೆಸಿಕೊಟ್ಟ ಮ್ಯಾಜಿಕ್ ಪ್ರದರ್ಶನ ಹಾಗೂ ಬೆಲ್ಲದ ದೋಣಿ ನಾಟಕಗಳು ಜನರನ್ನು ರಂಜಿಸಿದವು.
ಸಾಹಿತಿ ಹನೂರು ಚನ್ನಪ್ಪ ಮಾತನಾಡಿ, ‘ಜಿಲ್ಲೆಯು ಜನಪದ ಕಲಾವಿದರ ತವರೂರು. ಸಾವಿರಾರು ಕಲಾವಿದರು ಇನ್ನೂ ನೇಪತ್ಯದಲ್ಲಿ ಇದ್ದಾರೆ. ನಾಟಕಗಳ ಬಗ್ಗೆ ಇನ್ನೂ ಪ್ರೀತಿ ಇದೆ. ಸಂಗೀತ ಮತ್ತು ಕಲಾ ಪರಂಪರೆಯನ್ನು ಜಿಲ್ಲೆಯ ಜನರು ಆಸಕ್ತಿಯಿಂದ ವೀಕ್ಷಿಸುತ್ತಾರೆ. ಹಾಗಾಗಿ, ಹೊಸ ಕಲಾವಿದರನ್ನು ವೇದಿಕೆಗಳಿಗೆ ಕರೆತರುವ ಕೆಲಸ ಆಗಬೇಕು’ ಎಂದರು.
ಜನಪದ ಕಲಾವಿದ ಸಿ.ಎಂ.ನರಸಿಂಹಮೂರ್ತಿ ಮಾತನಾಡಿದರು. ರಂಗಕರ್ಮಿ ಸಂತೆಮರಹಳ್ಳಿ ಎಂ.ಪಿ.ರಾಜು ಅವರನ್ನು ಸನ್ಮಾನಿಸಲಾಯಿತು.
ದುಗ್ಗಹಟ್ಟಿ ಪಿ.ವೀರಭದ್ರಪ್ಪ, ನಿರಂಜನಸ್ವಾಮಿ, ಕಲಾವಿದ ಶಾಂತರಾಜು, ಬಸವರಾಜಪ್ಪ, ಪುಟ್ಟಸುಬ್ಬಪ್ಪ, ಕಲೆ ನಟರಾಜು, ಮಾಂಬಳ್ಳಿ ಅರುಣ್‌ಕುಮಾರ್, ಪ್ರಕಾಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.