ADVERTISEMENT

ಯಳಂದೂರು: ವೃದ್ಧೆ ಕೆಂಪಮ್ಮಗೆ ಕೊನೆಗೂ ನೆರವು!

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 14:04 IST
Last Updated 4 ಜುಲೈ 2025, 14:04 IST
ಯಳಂದೂರು ತಾಲ್ಲೂಕಿನ ಕೆಸ್ತೂರು ಗ್ರಾಮದ ಕೆಂಪಮ್ಮ ಅವರ ನಿವಾಸಕ್ಕೆ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ ಮಾಹಿತಿ ಪಡೆದರು 
ಯಳಂದೂರು ತಾಲ್ಲೂಕಿನ ಕೆಸ್ತೂರು ಗ್ರಾಮದ ಕೆಂಪಮ್ಮ ಅವರ ನಿವಾಸಕ್ಕೆ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ ಮಾಹಿತಿ ಪಡೆದರು    

ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದ ಅಂಬೇಡ್ಕರ್ ಬಡಾವಣೆಯ ನಿವಾಸಿ ಕೆಂಪಮ್ಮರವರಿಗೆ ಕೊನೆಗೂ ಸರ್ಕಾರದ ಗ್ಯಾರಂಟಿ ಯೋಜನೆಗಳ ನೆರವು ನೀಡಲು ಅಧಿಕಾರಿಗಳು ಮುಂದಾದರು. ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿ ಗೃಹಲಕ್ಷ್ಮಿ ಹಾಗೂ ಪಡಿತರ ನೆರವು ಕಲ್ಪಿಸಲು ಕೆಂಪಮ್ಮ ಅವರನ್ನು ಕಚೇರಿಗೆ ಕರೆದೊಯ್ದುರು.

ಕಳೆದ ಜೂನ್ 29ರ ಪ್ರಜಾವಾಣಿ ಸಂಚಿಕೆಯಲ್ಲಿ ‘ವೃದ್ಧೆ ಕೆಂಪಮ್ಮಗೆ ದಕ್ಕದ ಗ್ಯಾರಂಟಿ’ ಶೀರ್ಷಿಕೆಯಡಿ ಸುದ್ದಿ ಪ್ರಕಟವಾಗಿತ್ತು.

ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕರಾದ ಸುಮಿತ್ರ ಪಾಟೀಲ್, ಸರಸ್ವತಿ ಹಾಗೂ ಅಂಗನವಾಡಿ ಶಿಕ್ಷಕಿಯರು ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.