ADVERTISEMENT

ಅಪರೂಪದ ಶಿಲ್ಪಕಲಾ ದೇವಾಲಯ

​ಪ್ರಜಾವಾಣಿ ವಾರ್ತೆ
Published 20 ಜೂನ್ 2011, 9:30 IST
Last Updated 20 ಜೂನ್ 2011, 9:30 IST
ಅಪರೂಪದ ಶಿಲ್ಪಕಲಾ ದೇವಾಲಯ
ಅಪರೂಪದ ಶಿಲ್ಪಕಲಾ ದೇವಾಲಯ   

ಶಿಡ್ಲಘಟ್ಟ: ಜಿಲ್ಲೆಯಲ್ಲಿ ಶಿಲ್ಪಕಲೆ ಎಂದೊಡನೆ ಚೋಳರ ಕಾಲದ ನಂದಿಯ ಭೋಗನಂದೀಶ್ವರ ದೇವಾಲಯ ನೆನಪಾಗುತ್ತದೆ. ಇಷ್ಟೇ ಸುಂದರ ಶಿಲ್ಪಕಲಾ ದೇವಾಲಯ ಪಟ್ಟಣದಲ್ಲಿದೆ. ಇದು ಕೋಟೆ ಸೋಮೇಶ್ವರ ದೇವಾಲಯ.

ದೇವಾಲಯ ಸೋಮೇಶ್ವರ ಸ್ವಾಮಿಯದ್ದು, ಇಲ್ಲಿನ ಕಂಬಗಳ ಮೇಲೆ ರಾಮ, ಕೃಷ್ಣ, ಪರಶುರಾಮ, ವಾಮನ ಮುಂತಾದ ವಿಷ್ಣುವಿನ ದಶಾವತಾರದ ಕೆತ್ತನೆಗಳಿವೆ. ಬೇಡರ ಕಣ್ಣಪ್ಪ ತನ್ನ ಕಣ್ಣುಗಳನ್ನು ಕಿತ್ತು ಶಿವನಿಗೆ ಅರ್ಪಿಸುವ ಶಿಲ್ಪಗಳಿವೆ. ಅಲಂಕಾರ ಮಾಡಿಕೊಳ್ಳುವ ಸ್ತ್ರೀ, ಮೃದಂಗ, ಕೊಳಲು ಮುಂತಾದ ವಾದ್ಯಗಳನ್ನು ನುಡಿಸುವ ಶಿಲ್ಪಗಳು ಹಾಗೂ ವೆಂಕಟೇಶ್ವರ ಶಿಲ್ಪಗಳು ಅತ್ಯಾಕರ್ಷಕವಾಗಿವೆ. ದೇವಾಲಯದ ಮುಂದಿರುವ ಗರುಡಗಂಬದ ಕೆಳಗೆ ವಿಘ್ನೇಶ್ವರನ ಅಕ್ಕಪಕ್ಕ ಹಲಸಿನಹಣ್ಣನ್ನು ಹೊತ್ತುಕೊಂಡಿರುವ ವಿಶೇಷ ಶಿಲ್ಪವಿದೆ.

`ದೇವಾಲಯ ಈಗ ಶಿಥಿಲವಾಗಿದೆ. ಮುಜರಾಯಿಗೆ ಸೇರಿದ್ದರೂ ಅಭಿವೃದ್ಧಿಯಾಗಿಲ್ಲ. ಇದನ್ನು ಕಂಡು ಕೆಲ ಆಸಕ್ತ ಭಕ್ತರು ಹಣ ಸಂಗ್ರಹಿಸಿ ದೇವಾಲಯ ದುರಸ್ತಿಗೊಳಿಸಲು ಮುಂದಾಗಿದ್ದಾರೆ. ಪಟ್ಟಣದಲ್ಲಿ ಹಿಂದೆ ಚನ್ನಕೇಶ್ವರ ದೇವಾಲಯ ಇತ್ತು. ಅದು ಕಾಲಾನುಕ್ರಮದಲ್ಲಿ ನಾಶಗೊಂಡಿತು. ಅಲ್ಲಿನ ಕೆಲ ಶಿಲ್ಪಗಳು, ಕೆತ್ತನೆಗಳುಳ್ಳ ಕಂಬಗಳು ಸೋಮೇಶ್ವರ ದೇವಾಲ ುದಲ್ಲಿ ಸೇರಿದವು ಎಂದು ಕೆಲ ಹಿರಿಯರು ಹೇಳುವರು. ಆದರೂ ಅಪರೂಪದ ಶಿಲ್ಪಕಲೆಯುಳ್ಳ ಈ ದೇವಾಲಯವನ್ನು ಪುನರುತ್ಥಾನ ಗೊಳಿಸುವ ಅಗತ್ಯವಿದೆ~ ಎಂದು ದೇವಾಲಯ ಅರ್ಚಕ ಕೆ.ಎನ್.ರಾಜಶೇಖರ್ ತಿಳಿಸಿದರು.

 `ತಾಲ್ಲೂಕಿನಲ್ಲೇ ಅತ್ಯಂತ ಪುರಾತನ ಮತ್ತು ಅಪರೂಪದ ಕೆತ್ತನೆಗಳುಳ್ಳ ಸೊಮೇಶ್ವರ ದೇವಾಲಯ ಶೀಥಿಲ ವಾಗಿದೆ. ನಂದಿ ದೇವಾಲಯದ ಶಿಲ್ಪಕಲೆ ಯನ್ನು ಹೋಲುವುದರಿಂದ ಇದೂ ಕೂಡ ಚೋಳರ ಕಾಲದಲ್ಲೇ ನಿರ್ಮಾಣ ವಾಗಿರಬಹುದು. ಹೊಸ ದೇಗುಲ ಗಳನ್ನು ನಿರ್ಮಿಸಲು ಉತ್ಸುಕತೆ ತೋರಿಸುವ ಜನತೆ ಪರಂಪರೆಯನ್ನು ಪ್ರತಿನಿಧಿಸುವ ಶಿಲ್ಪಕಲೆಯುಳ್ಳ ಇಂತಹ ದೇವಾಲಯ ವನ್ನು ಅಭಿವೃದ್ಧಿಪಡಿಸ ಬೇಕು~ ಎಂದು ಹಿರಿಯರು ಹೇಳಿದರು.

`ಕೋಟೆ ಸೋಮೇಶ್ವರ ದೇವಾಲಯ ವನ್ನು ಜೀರ್ಣೋದ್ಧಾರ ಮಾಡ ಬೇಕೆಂದು ಕೆಲವರು ಹೊರಟೆವು. 4.5 ಲಕ್ಷದಷ್ಟು ಹಣವನ್ನು ಖರ್ಚು ಮಾಡಿ ಕಲ್ಲುಗಳನ್ನು ತರಿಸಿದ್ದೇವೆ. ಇಲ್ಲಿರುವ ಶಿಲ್ಪಕಲೆ, ಹಳೆಯ ಎಲ್ಲಾ ಕಂಬಗಳನ್ನೂ ಉಳಿಸಿಕೊಂಡು ಇದನ್ನು ಸುರಕ್ಷಿತ ವಾಗಿರಿಸಲು ಕ್ರಮ ಕೈಗೊಳ್ಳು ತ್ತೇವೆ. ನಮ್ಮ ಕ್ಷೇತ್ರದ ಶಾಸಕರು ಅನುದಾನ ನೀಡುವುದಾಗಿ ತಿಳಿಸಿದ್ದಾರೆ~ ಎಂದು ಡಾಲ್ಫಿನ್ ವಿದ್ಯಾಸಂಸ್ಥೆ ಅಧ್ಯಕ್ಷ ನಾಗರಾಜ್ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.