ADVERTISEMENT

‘ಅಲ್ಪಸಂಖ್ಯಾತರ ಹಿತ ಕಾಪಾಡಲು ಜೆಡಿಎಸ್ ಬದ್ಧ’

ಕಾರ್ಯಕರ್ತರ ಸಭೆಯಲ್ಲಿ ಜಾಫರ್‌ ಉಲ್ಲಾ ಖಾನ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 4 ಮೇ 2018, 8:19 IST
Last Updated 4 ಮೇ 2018, 8:19 IST

ಗೌರಿಬಿದನೂರು: ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಮೃದು ಮತ್ತು ಕಠಿಣ ವಿಷಗಳಿದ್ದಂತೆ. ಅವು ಜೊತೆಗಿದ್ದರೆ ಆಪತ್ತು ತಪ್ಪಿದ್ದಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಜಾಫರ್‌ ಉಲ್ಲಾ ಖಾನ್‌ ತಿಳಿಸಿದರು.

ಜೆಡಿಎಸ್ ವತಿಯಿಂದ ಏರ್ಪಡಿಸಿದ್ದ 'ಅಲ್ಪಸಂಖ್ಯಾತ ಕಾರ್ಯಕರ್ತರ ಸಭೆ' ಯನ್ನು ಉದ್ದೇಶಿಸಿ ಅವರು ಮಾತನಾಡಿದರು. ರಾಜ್ಯದ ಜನರು ಕುಮಾರಸ್ವಾಮಿ ಅವರ 20 ತಿಂಗಳ ಅಧಿಕಾರವಧಿಯಲ್ಲಿ ಮಾಡಿದ ಜನಪರ ಕಾರ್ಯಗಳನ್ನು ಮರೆತಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದವರು ಮಾಡಿದ ನಂಬಿಕೆ ದ್ರೋಹದಿಂದ ಕೊಟ್ಟ ಮಾತನ್ನು ತಪ್ಪಬೇಕಾದಂತಹ ಪರಿಸ್ಥಿತಿ ಬಂದಿತ್ತು. ಆದರೆ ಎರಡೂ ಸರ್ಕಾರಗಳ ದಶಕದ ಭ್ರಷ್ಟ ಆಡಳಿತದಿಂದ ಜನರು ಎಚ್ಚೆತ್ತುಕೊಂಡು ಮತ್ತೆ ಜೆಡಿಎಸ್ ಅಧಿಕಾರಕ್ಕೆ ತರಲು ಮುಂದಾಗಿದ್ದಾರೆ’ ಎಂದು ಹೇಳಿದರು.

ಜೆಡಿಎಸ್ ರಾಜ್ಯ ವಕ್ತಾರ ಷಫಿ ಉಲ್ಲಾ ಮಾತನಾಡಿ, 'ರಾಜ್ಯದಲ್ಲಿ ಶಾಂತಿ ಮತ್ತು ನೆಮ್ಮದಿ ಹದಗೆಡಿಸಿ, ಜನರ ನಡುವೆ ಗಲಭೆ ಸೃಷ್ಟಿ ಮಾಡಿದ ಬಿಜೆಪಿ ಹಾಗೂ ಸರ್ವಾಧಿಕಾರಿ ಧೋರಣೆಯಿಂದ ಜನರ ಜೀವಕ್ಕೆ ಕುತ್ತು ತಂದ ಕಾಂಗ್ರೆಸ್‌ ಪಕ್ಷಗಳಿಂದ ಜನರು ಬೇಸತ್ತಿದ್ದಾರೆ. ಬದಲಾವಣೆಗಾಗಿ ಸದವಕಾಶ ಕೂಡಿಬಂದಿದ್ದು, ಜೆಡಿಎಸ್ ಪರ್ಯಾಯ ಆಯ್ಕೆಯಾಗಿದೆ’ ಎಂದರು.

ADVERTISEMENT

ಜೆಡಿಎಸ್ ಅಭ್ಯರ್ಥಿ ಸಿ.ಆರ್. ನರಸಿಂಹಮೂರ್ತಿ ಮಾತನಾಡಿದರು. ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಡಾ. ರೋಷನ್ ಅಬ್ಬಾಸ್, ಆರ್.ಅಶೋಕ್ ಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಮಂಜುನಾಥರೆಡ್ಡಿ, ಮುಖಂಡರಾದ ವೇಣುಗೋಪಾಲ್, ಬಿ.ಜಿ.ವೇಣುಗೋಪಾಲರೆಡ್ಡಿ, ಎಸ್.ಲಕ್ಷ್ಮಿನಾರಾಯಣ ಶೆಟ್ಟಿ, ಮಹಮ್ಮದ್ ಬೇಗ್, ಜಮಿನ್ ರಜಾ, ಪ್ರಭಾ ನಾರಾಯಣಗೌಡ, ಪೋತೇನಹಳ್ಳಿ ರಾಮಣ್ಣ, ಎಚ್.ಆರ್.ಗೋವಿಂದರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.