ADVERTISEMENT

ಆ.12ರಂದು ಅಂಗನವಾಡಿ ನೌಕರರ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 27 ಜೂನ್ 2012, 8:40 IST
Last Updated 27 ಜೂನ್ 2012, 8:40 IST

ಚಿಕ್ಕಬಳ್ಳಾಪುರ: ಅಂಗನವಾಡಿ ನೌಕರರ ಜಿಲ್ಲಾಮಟ್ಟದ ಸಮ್ಮೇಳನ ಈ ಬಾರಿ ಗುಡಿಬಂಡೆಯಲ್ಲಿ ನಡೆಯುವುದು ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಲಕ್ಷ್ಮೀದೇವಮ್ಮ ತಿಳಿಸಿದರು.

ಆಗಸ್ಟ್ 12, 13ರಂದು ಗುಡಿಬಂಡೆಯಲ್ಲಿ ಸಮ್ಮೇಳನ ನಡೆಯುವುದು. ಈ ಸಂದರ್ಭದಲ್ಲಿ ಜನಾಂದೋಲನಾ ರ‌್ಯಾಲಿ ನಡೆಸಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಅಂಗನವಾಡಿ ನೌಕರರ ಪರವಾಗಿ ಸಿಐಟಿಯು ಸಂಘಟನೆಯು ಮೂರು ವರ್ಷಕ್ಕೊಮ್ಮೆ ತಾಲ್ಲೂಕು ಮಟ್ಟದಿಂದ ಹಿಡಿದು ರಾಷ್ಟ್ರಮಟ್ಟದವರೆಗೆ ಸಮ್ಮೇಳನ ನಡೆಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡುತ್ತದೆ. 13ರಂದು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮತ್ತು ಜಿಲ್ಲಾಮಟ್ಟದ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ವಿವರಿಸಿದರು.

ಅಂಗನವಾಡಿ ನೌಕರರ ಪ್ರಥಮ ತಾಲ್ಲೂಕು ಸಮ್ಮೇಳನದ ನೂತನ ಸಮಿತಿ ಅಧ್ಯಕ್ಷೆಯಾಗಿ ಟಿ.ಕೆ.ಗಾಯತ್ರಿ, ಉಪಾಧ್ಯಕ್ಷೆಯಾಗಿ ಮಂಜುಳಾ, ಪ್ರಧಾನ ಕಾರ್ಯದರ್ಶಿಯಾಗಿ ಐಶಾಬಿ, ಸಹ ಕಾರ್ಯದರ್ಶಿಯಾಗಿ ಗಾಯತ್ರಿ, ಖಜಾಂಚಿಯಾಗಿ ಜಿ.ಎಸ್.ಪದ್ಮಾ, ಗೌರವಾಧ್ಯಕ್ಷರಾಗಿ ಬಿ.ಎನ್.ಮುನಿಕೃಷ್ಣಪ್ಪ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಬಿ.ಎನ್.ಮುನಿಕೃಷ್ಣಪ್ಪ, ಟಿ.ಕೆ.ಗಾಯಿತ್ರಿ, ಮಂಜುಳಾ, ಐಶಾಬಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.