ADVERTISEMENT

ಕುಡಿಯುವ ನೀರಿನ ಸಮಸ್ಯೆ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 6:15 IST
Last Updated 17 ಫೆಬ್ರುವರಿ 2012, 6:15 IST

ಚಿಂತಾಮಣಿ: ತಾಲ್ಲೂಕಿನ ನಾರ ಮಾಕಲಹಳ್ಳಿಯಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು  ಗ್ರಾಮಸ್ಥರು ಒತ್ತಾಯಿಸಿ ಬುಧವಾರ ಪಂಚಾಯಿತಿ ತಾಂತ್ರಿಕ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ ಕಳೆದ ಎರಡು ತಿಂಗಳಿ ನಿಂದ ಕುಡಿಯುವ ನೀರಿನ ಕೊರತೆ ಯುಂಟಾಗಿದ್ದು ಗ್ರಾಮಸ್ಥರು ಪರ ದಾಡುತ್ತಿದ್ದಾರೆ. ಜನರಿಗೆ ಹಾಗೂ ಜಾನುವಾರುಗಳಿಗೆ ನೀರು ಒದಗಿಸಲು ಸಾರ್ವಜನಿಕರು ಹರಸಾಹಸ ಪಡ ಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿದರು.

ಗ್ರಾಮದ ಜನತೆ 4-5 ಕಿ.ಮೀ ದೂರದಿಂದ ನೀರನ್ನು ಹೊತ್ತು ತರ ಬೇಕಾಗಿದೆ. ಈ ಬಗ್ಗೆ ಹಲವು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನ ವಾಗಿಲ್ಲ.

ಕೊಳವೆ ಬಾವಿ ಕೊರೆಸಿದ್ದರೂ ಅಗತ್ಯ ಪಂಪ್ ಮೋಟಾರು ಮತ್ತಿತರ ಸಲಕರಣೆ ಒದಗಿಸದೆ ಅಧಿಕಾರಿಗಳು ನಿರ್ಲಕ್ಷ್ಯ ಭಾವನೆ ತಾಳಿದ್ದಾರೆ. ಗ್ರಾಮದ ಜನರ ಕಷ್ಟಕ್ಕೆ ಕ್ಯಾರಿ ಅನ್ನು ತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ನಂತರ ಸ್ಥಳಕ್ಕೆ ಆಗಮಿಸಿದ ಪಂಚಾಯತ್ ತಾಂತ್ರಿಕ ಇಲಾಖೆ ಅಧಿಕಾರಿಗಳು ಪ್ರತಿಭಟ ನಾಕಾರ ರೊಂದಿಗೆ ಮಾತುಕತೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದಾಗ ಪ್ರತಿಭಟನೆ ಹಿಂಪಡೆಯಲಾಯಿತು. 

 ಮುಖಂಡರಾದ ಶ್ರೀರಾಮರೆಡ್ಡಿ, ಮೂರ್ತಿ, ವೆಂಕಟರವಣಪ್ಪ, ರಾಮ ಕೃಷ್ಣಪ್ಪ, ಮುನಿಯಪ್ಪ, ದಂಡೋರ ಕೃಷ್ಣಪ್ಪ, ವೆಂಕಟರಾಯಪ್ಪ, ಮಂಜು, ನಾರೆಪ್ಪ, ನರಸಿಂಹಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.