ADVERTISEMENT

ಗಡಿಯಲ್ಲಿ ಕನ್ನಡ ಬೆಳವಣಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 5:30 IST
Last Updated 22 ಫೆಬ್ರುವರಿ 2011, 5:30 IST

ಚಿಂತಾಮಣಿ: ರಾಜ್ಯದ ಗಡಿ ಭಾಗಗಳಲ್ಲಿ ಕನ್ನಡವು ಬೆಳೆಯಲು ಎಲ್ಲ ಕನ್ನಡಪರ ಸಂಘಟನೆಗಳು ಹಾಗೂ ಕನ್ನಡ ಅಭಿಮಾನಿಗಳು ಪರಸ್ಪರ ಒಗ್ಗಟ್ಟಿನಿಂದ ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸಬೇಕೆಂದು ಡಾ.ವೈ.ಎಚ್.ವಜೀರ್ ಅಹಮದ್ ಸಲಹೆ ನೀಡಿದರು.ಕನ್ನಡ ಸಾಹಿತ್ಯ ವೇದಿಕೆ ಹಾಗೂ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ನಗರದ ಎನ್.ಆರ್.ಬಡಾವಣೆಯಲ್ಲಿರುವ ಪ್ರೊ.ವಿಜಯೇಂದ್ರ ಅವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಮನೆಗೊಂದು ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿನ ಕನ್ನಡೇತರರು ಕನ್ನಡ ಕಲಿತು ಇಲ್ಲಿಯ ಜನತೆಯೊಂದಿಗೆ ಬೆರೆತು ಬದುಕಬೇಕು. ಕನ್ನಡಿಗರು ಸಹ ಹೊರ ರಾಜ್ಯಗಳಿಗೆ ಹೋದಾಗ ಅಲ್ಲಿಯ ಭಾಷೆ ಕಲಿತು ಅವರೊಂದಿಗೆ ಹೊಂದಿಕೊಂಡು ಹೋಗಬೇಕು. ನಮ್ಮ ಭಾಷೆಯ ಜತೆಗೆ  ನಾವೆಲ್ಲ ಭಾರತೀಯರು ಎಂಬುದು ಮನಸ್ಸನಲ್ಲಿರಬೇಕು.ಪ್ರೊ.ವಿಜಯೇಂದ್ರ ಮಾತನಾಡಿ, ಕವಿಗೋಷ್ಠಿ ಯಾವುದೇ ನಿರ್ದಿಷ್ಟ ಸ್ಥಳಕ್ಕೆ ಮಾತ್ರ ಸೀಮಿತಗೊಳ್ಳದೆ  ಜನ ಸಾಮಾನ್ಯರು ಸಾಹಿತ್ಯದ ಬಗ್ಗೆ ಒಲವು ಮೂಡಿಸಿಕೊಳ್ಳಲು ಸಹಕಾರಿಯಾಗುತ್ತಿದೆ ಎಂದರು.

ಸಾಹಿತ್ಯ ವೇದಿಕೆಯ ಗೌರವಾಧ್ಯಕ್ಷ ಕಾಗತಿ ವೆಂಕಟರತ್ನಂ  ಮಾತನಾಡಿದರು.ಮುಳ್ಳಹಳ್ಳಿ ನಂಜುಂಡಗೌಡ ಹಾಸ್ಯ ಚಟಾಕಿ ಮೂಲಕ ರಂಜಿಸಿದರು. ಸೀಕಲ್ ನರಸಿಂಹಪ್ಪ, ಎಸ್‌ಎಫ್‌ಎಸ್ ಸುರೇಶ್, ವಿ.ಎಚ್.ಬಾಲಕೃಷ್ಣ, ವಿಶಾಲಾಕ್ಷಿ, ಮೌಲ್ಯ ಹಾಗೂ ವೈಜಯಂತಿ ಅವರು ಜನಪದಗೀತೆ,  ಭಕ್ತಿಗೀತೆ ಪ್ರಸ್ತುತ ಪಡಿಸಿದರುಕೋಟಗಲ್ ನಾಗಸುಬ್ರಮಣ್ಯಂ, ಚಾಂಪಲ್ಲಿ ಚಂದ್ರಶೇಖರಯ್ಯ, ಜಯಲಕ್ಷ್ಮಿ, ಜಿ.ಭಾಗೀರಥಿ, ವಿ.ವೆಂಕಟರತ್ನಂ, ಪರಮೇಶ್ವರಗುಪ್ತ, ಕಣ್ಮಣಿ ಗೀತ, ಸಾಯಿನಾಥ್, ಅಶ್ವತ್ಥನಾರಾಯಣ, ಕೆ.ಎಸ್.ನೂರುಲ್ಲಾ, ರಾಯಲ್ ಮಂಜುನಾಥ್, ಭೋಜರಾಜ ಮತ್ತಿತರರು  ಸ್ವರಚಿತ ಕವನ ವಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.