ಗುಡಿಬಂಡೆ: ದೇಶದಲ್ಲಿ ನೆಲೆಸಿರುವ ಶಾಂತಿ ಮತ್ತು ಸಮೃದ್ಧಿಯನ್ನು ನಾಶ ಮಾಡಲು ಶತ್ರು ರಾಷ್ಟ್ರಗಳು ಯತ್ನಿಸುತ್ತಿವೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಮಾತನಾಡಿದರು.
ವಿದೇಶಿ ಸಂಚಿನ ಭಾಗವಾಗಿ ಕೆಲ ದುಷ್ಟಶಕ್ತಿಗಳು ಕೋಮು ಗಲಭೆ ಮತ್ತು ನರಮೇಧದಂಥ ಅಮಾನವೀಯ ಕೆಲಸಕ್ಕೆ ಕೈ ಹಾಕಿ ಅಖಂಡ ಭಾರತದ ಕಲ್ಪನೆಗೆ ಕೊಡಲಿ ಪೆಟ್ಟು ಹಾಕುತ್ತಿವೆ ಎಂದು ತಿಳಿಸಿದರು. ಯುವ ಜನತೆ ದೇಶ ಪ್ರೇಮ ಬೆಳೆಸಿಕೊಂಡು ನವ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಭಾರತದ ಸಮಗ್ರತೆಯನ್ನು ಇತರ ರಾಷ್ಟ್ರಗಳಿಗೆ ಸಾರಿ ತೋರಿಸಬೇಕು ಎಂದರು.
ಶಾಲಾ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಗಮನ ಸೆಳೆಯಿತು. ಜಿ.ಪಂ. ಸದಸ್ಯ ಎಂ.ವಿ.ಕೃಷ್ಣಪ್ಪ, ಪ.ಪಂ. ಅಧ್ಯಕ್ಷ ಅಪ್ಸರ್ ಪಾಷ, ಸದಸ್ಯರಾದ ರಾಜಣ್ಣ, ರಿಯಾಜ್ ಪಾಷ, ಲಕ್ಷ್ಮಿಕಾಂತಮ್ಮ, ಚಂದ್ರಶೇಖರ್, ತಹಶೀಲ್ದಾರ್ ನಂಜಪ್ಪ, ಬಿಇಒ ವೆಂಕಟರಮಣಪ್ಪ, ಕಾರ್ಯನಿರ್ವಹಣಾಧಿಕಾರಿ ನಾಗರಾಜ್, ಪ.ಪಂ. ಮುಖ್ಯಾಧಿಕಾರಿ ಪ್ರದೀಪ್ ಕುಮಾರ್, ಕೋಚಿಮುಲ್ ನಿರ್ದೇಶಕ ಅಶ್ವತ್ಥರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ನರಸಿಂಹರೆಡ್ಡಿ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.