ADVERTISEMENT

`ದೇಸಿ ಸಂಗೀತ, ಸಂಸ್ಕೃತಿ ಉಳಿಯಲಿ'

​ಪ್ರಜಾವಾಣಿ ವಾರ್ತೆ
Published 13 ಜೂನ್ 2013, 8:42 IST
Last Updated 13 ಜೂನ್ 2013, 8:42 IST

ತಿಪಟೂರು: ದೇಸಿ ಸಂಗೀತ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಯುವ ಪೀಳಿಗೆ ಮುಂದಾಗಬೇಕು ಎಂದು ಸಂಗೀತ ಕಲಾವಿದ ಜಾವಗಲ್ ಪ್ರಸನ್ನ ತಿಳಿಸಿದರು.

ಬೆಂಗಳೂರಿನ ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್, ಸ್ವರ ಸುರಭಿ ಟ್ರಸ್ಟ್ ಹಾಗೂ ತಿಪಟೂರಿನ ಶಂಕರ್ ಟ್ರೈನಿಂಗ್ ಸೆಂಟರ್‌ನಿಂದ ನಗರದಲ್ಲಿ ಈಚೆಗೆ ಮೂರು ದಿನಗಳ ಕಾಲ ನಡೆದ ಆನಂದಕಂದ ವಿರಚಿತ ಭಾವಗೀತೆಗಳ ತರಬೇತಿ ಶಿಬಿರ `ಬನ್ನಿ ನಮ್ಮ ಹಾಡಿಗೆ' ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ನಮ್ಮ ಸಂಗೀತ ಪರಂಪರೆ ವೈವಿಧ್ಯ ಮತ್ತು ವೈಶಿಷ್ಟ್ಯಪೂರ್ಣವಾಗಿದೆ. ಸಂಗೀತದ ಬೆಳವಣಿಗೆ ಜತೆಗೆ ವ್ಯಕ್ತಿತ್ವ ವಿಕಸನಕ್ಕೂ ಪೂರಕವಾಗಿದೆ ಎಂದು ತಿಳಿಸಿದರು.

ಬೆಂಗಳೂರು ಸ್ವರ ಸುರಭಿ ಟ್ರಸ್ಟ್‌ನ  ಸುವರ್ಣಮ್ಮ ಮಾತನಾಡಿ, ಮಕ್ಕಳ ಸಂಗೀತಾಭ್ಯಾಸ ಓದಿನ ಆಸಕ್ತಿಯನ್ನು ಹೆಚ್ಚಿಸುತ್ತದೆ. ಏಕಾಗ್ರತೆ, ತಾಧ್ಯಾತ್ಮ, ವಿಶಾಲ ಮನೋಭಾವ ಬೆಳೆಯುತ್ತದೆ. ಸಾಹಿತ್ಯದಲ್ಲಿ ಒಲವು ಮೂಡುತ್ತದೆ ಎಂದು ತಿಳಿಸಿದರು. ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್‌ನ ಸತೀಶ್ ಕುಲಕರ್ಣಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.