ADVERTISEMENT

ಪರಂಗಿ, ಹಿಪ್ಪುನೆರಳೆಗೆ ತಿಗಣೆ ಕಾಟ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 7:25 IST
Last Updated 22 ಸೆಪ್ಟೆಂಬರ್ 2011, 7:25 IST

ಶಿಡ್ಲಘಟ್ಟ: ಪರಂಗಿ ಬೆಳೆಗೆ ಬಾಧಿ ಸುತ್ತಿರುವ ತುಪ್ಪಳ ತಿಗಣೆಯ ಹಾವಳಿ  ಈಗ ತಾಲ್ಲೂಕಿನ ಕುಂದಲಗುರ್ಕಿ ಸುತ್ತ ಮುತ್ತಲಿನ ಹಿಪ್ಪುನೇರಳೆ ಗಿಡಗಳಿಗೂ ವ್ಯಾಪಿಸಿದೆ.

ಇದಕ್ಕಿಂತ ಮೊದಲು ಪರಂಗಿ ಗಿಡದಲ್ಲಿ ಗಿಡ ಮತ್ತು ಕಾಯಿಗೆ ಕಾಣಿಸಿ ಕೊಂಡ ಪರಂಗಿ ತುಪ್ಪಳ ತಿಗಣೆ ಕಾಟ ಇದೀಗ ಹಿಪ್ಪುನೇರಳೆ ಸೊಪ್ಪಿಗೂ ಹರಡು ತ್ತಿದೆ. ಇದರಿಂದ ತಾಲ್ಲೂಕಿನ ಬೆಳೆ ಗಾರರು ಬೇಸತ್ತಿದ್ದಾರೆ.

ರೋಗದ ಕುರಿತು `ಪ್ರಜಾವಾಣಿ~ ಯೊಂದಿಗೆ ಮಾತನಾಡಿದ ರೈತ ಮಾರುತಿ ಕುಮಾರ್ ` ಇದನ್ನು ಹೇಗೆ ಹತೋಟಿಗೆ ತರುವುದು ಮತ್ತು ಬೆಳೆಯನ್ನು ಹೇಗೆ ಉಳಿಸಿಕೊಳ್ಳುವುದು ಎಂಬುದು ತೋಚದಂತಾಗಿದೆ~ ಎಂದು ಆತಂಕ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ಈಚೆಗೆ ಭೇಟಿ ನೀಡಿದ್ದ  ರೇಷ್ಮೆ ಸಂಶೋಧನಾ ಕೇಂದ್ರದ ವಿಜ್ಞಾನಿ ಮತ್ತು ಅಧಿಕಾರಿಗಳು ಪರಿಶೀಲಿಸಿ,  `ಈ ರೋಗಕ್ಕೆ ಕಾರಣ ಪ್ಯಾರಾಕಾಕಸ್ ಮಾರ್ಜಿನೇಟಸ್ (ಪಪ್ಪಾಯ ಮೀಲಿಬಗ್) ಎಂಬ ಕೀಟ ಮೊದಲಿಗೆ ಗಿಡದ ಸುಳಿಯಲ್ಲಿ ಕಾಣಿಸಿ ಕೊಳ್ಳುತ್ತದೆ. ಆ ನಂತರ ಕಾಂಡ, ಹೂ, ಕಾಯಿ ಹಣ್ಣು ಸೇರಿದಂತೆ ಗಿಡದ ಪೂರ್ತಿಭಾಗ ವನ್ನು ಆವರಿಸಿ ಕೊಳ್ಳುತ್ತದೆ. 

ರೋಗಕ್ಕೆ ತುತ್ತಾದ ಗಿಡ ಬೆಳವಣಿಗೆ ಕಾಣದೆ ಕುರುಚಲು ಬಿದ್ದು ಒಣಗಿದಂತಾಗುತ್ತದೆ. ಪಪ್ಪಯಾ ಮೀಲಿ ಬಗ್ ಕೀಟ ಮಂಜಿನ ಬೂದಿ ಇದ್ದಂತೆ ಇರುವುದರಿಂದ ಆ ಕೀಟಗಳು ಆವರಿಸಿದ ಗಿಡವೂ ಬಿಳಿಬಣ್ಣಕ್ಕೆ ತಿರುಗಿದಂತೆ ಗೋಚರಿಸುತ್ತದೆ.

ಅಲ್ಲಿಗೆ ಆ ಗಿಡದ ಬೆಳವಣಿಗೆ ಸಂಪೂರ್ಣ ಸ್ಥಗಿತ~  ಎಂದು ರಾಜ್ಯ ರೇಷ್ಮೆ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರದ ವಿಜ್ಞಾನಿ ಡಾ.ಜೆ.ಸುಕುಮಾರ್ ಎನ್ನುತ್ತಾರೆ.

`ಮೀಲಿಬಗ್ ಕೀಟ ಬಾಧಿತ ಗಿಡ, ಕಾಯಿ, ಹಣ್ಣು, ಸಸಿ, ತರಕಾರಿ ಸಾಗಾಣಿಕೆಯಿಂದ ಈ ಕೀಟಗಳು ಒಂದು ಕಡೆಯಿಂದ ಒಂದು ಕಡೆಗೆ ಹರಡುತ್ತವೆ. ಇದಲ್ಲದೆ ಕೀಟ ಬಾಧಿತ ಗಿಡಮರಗಳ ಬಳಿ ಸುಳಿದಾಡುವ ಕುರಿ, ಮೇಕೆ, ದನಕರುಗಳಿಂದಲೂ ಈ ರೋಗ ಇತರೆಡೆಗೆ ಪಸರಿಸುತ್ತದೆ.

ಜತೆಗೆ ರೋಗಪೀಡಿತ ಗಿಡದಲ್ಲಿನ ಮೀಲಿಬಗ್ ಕೀಟ ಸ್ರವಿಸುವ ದ್ರವ್ಯ ಹೀರಿಕೊಳ್ಳಲು ಬರುವ ಇರುವೆ ಇನ್ನಿತರೆ ಕೀಟಗಳಿಂದಲೂ ರೋಗ ಹರಡುತ್ತದೆ. ಕೆಲವೊಮ್ಮೆ ಗಾಳಿ ಮೂಲಕವೂ ಹರಡುತ್ತದೆ~ ಎನ್ನುತ್ತಾರೆ.

`ಹಿಪ್ಪುನೇರಳೆ ತೋಟಗಳಲ್ಲಿ ಮತ್ತು ಬದುಗಳಲ್ಲಿ ಹಿಪ್ಪುನೇರಳೆ ಹೊರತು ಪಡಿಸಿ ಇತರೆ ಪರ್ಯಾಯ ಆಶ್ರಯ ಬೆಳೆ ಗಳನ್ನು, ಮರಗಿಡಗಳನ್ನು ಹಾಕ ಬಾರದು.

ಮುಖ್ಯವಾಗಿ ಪರಂಗಿ ಗಿಡ  ಬೆಳೆಸಲೇಬಾರದು. ಕೀಟ ಬಾಧೆಗೆ ತುತ್ತಾದ ಹಿಪ್ಪುನೇರಳೆ ಸಸ್ಯಗಳ ತೊಟಗಳು ಹಾಗೂ ಗಿಡದ ತುದಿ ಆರಂಭದಲ್ಲೇ ಕತ್ತರಿಸಿ ಪ್ರಸರಣಕ್ಕೆ ಅವಕಾಶವಿಲ್ಲದಂತೆ ಸುಡಬೇಕು.

ತುಂತುರು ನೀರಾವರಿ ಅಥವಾ ರೈನ್ ಗನ್ ನೀರಾವರಿ ಪದ್ಧತಿ ಅಳವಡಿಸಿ ಈ ಕೀಟದ ಬಾಧೆ ನಿಯಂತ್ರಿಸಬಹುದು. ರಾಸಾ ಯನಿಕ ಹಾಗೂ ಜೈವಿಕ ನಿಯಂತ್ರಣ ಕ್ರಮಗಳಿಂದಲೂ ಕೀಟ ಬಾಧೆ ನಿಯಂತ್ರಿಸಬಹುದು~ ಎಂದು ವಿವರಿಸಿದರು.
 
ಈ ಸಮಸ್ಯೆ ಕುರಿತು ರೇಷ್ಮೆ ಇಲಾಖೆ ಅಧಿಕಾರಿಗಳಾದ ಎಂ.ಎನ್.ಶಂಕರಪ್ಪ, ಎಂ.ಸಿ.ಚಂದ್ರಪ್ಪ, ಸತೀಶ್,  ತಿಮ್ಮ ರಾಜು,  ಮುನಿರಾಜು, ತಿಮ್ಮಪ್ಪ ಭೇಟಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT