ADVERTISEMENT

ಪಾತಪಾಳ್ಯ ಹೋಬಳಿಯಲ್ಲಿ ಭರ್ತಿಯಾದ ಕೆರೆಗಳು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2017, 5:47 IST
Last Updated 10 ಅಕ್ಟೋಬರ್ 2017, 5:47 IST

ಚೇಳೂರು: ಇತ್ತೀಚಿಗೆ ಸುರಿದ ಉತ್ತಮ ಮಳೆಯಿಂದಾಗಿ ಪಾತಪಾಳ್ಯ ಹೋಬಳಿಯ ಕದಿರಮ್ಮನ ಕೆರೆ, ನಾರೇಮದ್ದೇಪಲ್ಲಿ ಕೆರೆ, ದೇವಳವಾರಪಲ್ಲಿ ಕೆರೆ ಮತ್ತು ಸೀಮನ್ನಗಾರಪಲ್ಲಿ ಕೆರೆಗಳು ತುಂಬಿ ಕೋಡಿ ಹರಿಯುತ್ತಿವೆ.

ಸೆಪ್ಟಂಬರ್ 1 ರಿಂದ ಈವರೆಗೆ ಪಾತಪಾಳ್ಯ ಹೋಬಳಿಯಲ್ಲಿ 146 ಮಿಲಿ ಮೀಲಿಟರ್‌ ಮಳೆಗೆ ಬಿದ್ದಿದ್ದು ಇದರಿಂದ ಬಹುತೇಕ ಕೆರೆಗಳು ಭರ್ತಿಯಾಗಿವೆ. ಚೇಳೂರು ಹೋಬಳಿಯ ಕೆರೆ, ಕುಂಟೆಗಳಿಗೆ ಅಲ್ಪ ಸ್ವಲ್ಪ ನೀರು ಬಂದಿದ್ದು ಕುಡಿಯುವ ನೀರಿಗೆ ಸ್ವಲ್ಪ ಅನುಕೂಲವಾಗಿದೆ.

ಚೇಳೂರು ಹೋಬಳಿಯಲ್ಲಿ ಒಂದು ವಾರದಿಂದ ಉತ್ತಮ ಮಳೆ ಬಿದ್ದರೂ ಸಹ ಮಳೆ ನೀರು ಕೆರೆ, ಕುಂಟೆಗಳಿಗೆ ಬರುತ್ತಿಲ್ಲ. ಚೇಳೂರು ಹೋಬಳಿಯಲ್ಲಿ ಮಳೆ 329 ಮಿಲಿ ಮೀಟರ್‌ ಮಳೆಯಾಗಿದೆ.

ADVERTISEMENT

ಚೇಳೂರು ಹೋಬಳಿಯಲ್ಲಿ ಕೆರೆಗಳಿಗೆ ಮಳೆ ನೀರು ಸಾಗಿಸುವ ಕಾಲುವೆಗಳು ಒತ್ತುವರಿಯಾಗಿ, ಹೂಳಿನಿಂದ ಮುಚ್ಚಿ ಹೋಗಿದ್ದು, ಮಳೆಯಾದರೂ ಕೆರೆಗೆ ನೀರು ತಲುಪದ ಸ್ಥಿತಿ ನಿರ್ಮಾಣವಾಗಿದೆ.

ಸುತ್ತಲಿನ ಕೆಲ ಹೋಬಳಿಗಳಲ್ಲಿ ಕೆರೆಗಳು ತುಂಬಿ, ಕೋಡಿ ಹೋಗುತ್ತಿದ್ದರೂ ಚೇಳೂರು ಹೋಬಳಿಯಲ್ಲಿ ಕೆರೆಗಳು ಭರ್ತಿಯಾಗುವುದು ಅಪರೂಪ ವಾಗುತ್ತಿದೆ. ಇರುವು ದರಲ್ಲಿಯೇ ಷೇರ್‌ಖಾನ್ ಕೋಟೆ ಕೆರೆಗೆ ಅಲ್ಪ ಸ್ವಲ್ಪ ನೀರು ಬಂದು ಶೇಖರಣೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.