ADVERTISEMENT

ಶಿಕ್ಷಕರಿಗೆ ಅಧ್ಯಯನ ಅಗತ್ಯ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 6:40 IST
Last Updated 1 ಫೆಬ್ರುವರಿ 2011, 6:40 IST

ಶಿಡ್ಲಘಟ್ಟ: ಬದಲಾಗುತ್ತಿರುವ ವ್ಯವಸ್ಥೆಗಳಿಗೆ ಹೊಂದಿಕೊಂಡು ಗುಣಾತ್ಮಕ ಶಿಕ್ಷಣವನ್ನು ಕಾಯ್ದುಕೊಳ್ಳಲು ಶಿಕ್ಷಕರು ಸದಾ ಅಧ್ಯಯನಶೀಲರಾಗಿರಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಶ್ರೀಕಂಠ ಕರೆ ನೀಡಿದರು.

ತಾಲ್ಲೂಕಿನ ಜಂಗಮಕೋಟೆಯ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ವತಿಯಿಂದ ತಾಲ್ಲೂಕಿನ ಪ್ರೌಢಶಾಲೆಗಳಲ್ಲಿ ಗಣಿತ, ಸಮಾಜವಿಜ್ಞಾನ ಮತ್ತು ಇಂಗ್ಲೀಷ್ ಬೋಧಿಸುವ ಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ ಪುನಶ್ಚೇತನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

 ಕಲಿಕೆಯು ನಿಂತ ನೀರಿನಂತಾಗದೇ ನಿರಂತರ ಸಂಚಲನ ಇರಬೇಕು. ಸೇವೆಯಲ್ಲಿ ವೃತ್ತಿನಿಷ್ಠೆ, ಪ್ರಾಮಾಣಿಕತೆ, ಸಮಯಪ್ರಜ್ಞೆಯಂತಹ ಮೌಲ್ಯಗಳನ್ನು ಶಿಕ್ಷಕರು ರೂಢಿ ಸಿಕೊಳ್ಳಬೇಕು ಎಂದು ಎನ್.ಶ್ರೀಕಂಠ ಅವರು ತಿಳಿಸಿದರು. ತಾಲ್ಲೂಕಿನ ವಿವಿಧ ಪ್ರೌಢಶಾಲೆಗಳ 100 ಕ್ಕೂ ಅಧಿಕಮಂದಿ ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ವಿಷಯ ಪರಿವೀಕ್ಷಕ ರಾಮಕೃಷ್ಣಪ್ಪ, ಉಸ್ಮಾನ್‌ಸಾಬ್, ವಿಮಲಮ್ಮ, ಮುಖ್ಯಶಿಕ್ಷಕ ಗೋವಿಂದಚವ್ಹಾಣ್, ರಾಜೇಶ್, ಚರಣ್‌ರಾಜ್, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರ್, ಕಾರ್ಯದರ್ಶಿ ಬೈರಾರೆಡ್ಡಿ, ಖಜಾಂಚಿ ಜಗದೀಶ್, ಸಂಪನ್ಮೂಲ ವ್ಯಕ್ತಿಗಳಾದ ವಿದ್ಯಾಶಂಕರ್, ಹನುಮಂತರಾವ್, ರಾಜಾರಾಂ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.