ADVERTISEMENT

ಸಂಘಗಳ ನೋಂದಣಿ ಕಡ್ಡಾಯ: ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2011, 6:45 IST
Last Updated 18 ಜೂನ್ 2011, 6:45 IST

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಅಡಿಯಲ್ಲಿ ಸುಮಾರು 3700 ಸಂಘ ಸಂಸ್ಥೆಗಳು ನೋಂದಣಿಯಾಗಿವೆ.

ಎಲ್ಲ ಸಂಘಗಳು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಾಲಂ 11ರ ಅಡಿ ಪ್ರತಿ ವರ್ಷ ಕಡ್ಡಾಯವಾಗಿ ಸರ್ವ ಸದಸ್ಯರ ಸಭೆ ನಡೆಸಿ, ಇದೇ ಕಾಯ್ದೆಯ ಕಾಲಂ 13ರ ಅನ್ವಯ ಸಂಘಗಳ ಲೆಕ್ಕಪರಿಶೋಧನೆ ಮಾಡಿಸಬೇಕು ಎಂದು ಸಹಕಾರ ಸಂಘಗಳ ಉಪನಿರ್ದೇಶಕರು ತಿಳಿಸಿದ್ದಾರೆ.

ವಾರ್ಷಿಕ ಸರ್ವಸದಸ್ಯರ ಸಭೆಯ ನಡಾವಳಿ, ಲೆಕ್ಕಪರಿಶೋಧನಾ ವರದಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ಪಟ್ಟಿಯನ್ನು ಸರ್ವಸದಸ್ಯರ ಸಭೆ ನಡೆಸಿ 14 ದಿನಗಳೊಳಗೆ ಕಚೇರಿಗೆ ತಪ್ಪದೆ ಸಲ್ಲಿಸಬೇಕು.

ಆದರೆ 3700 ಸಂಘ ಸಂಸ್ಥೆಗಳ ಪೈಕಿ ಸುಮಾರು 3100 ಸಂಘ ಸಂಸ್ಥೆಗಳು ವಾರ್ಷಿಕ ದಾಖಲಾತಿಗಳನ್ನು ನಿಯಮಿತ ಕಾಲದಲ್ಲಿ ಕಚೇರಿಗೆ ಸಲ್ಲಿಸಿಲ್ಲ. ಈ ಸಂಬಂಧ ಈಗಾಗಲೇ ಅನೇಕ ಬಾರಿ ಪತ್ರಿಕಾ ಪ್ರಕಟಣೆಗಳ ಮೂಲಕ ಜಿಲ್ಲೆಯಲ್ಲಿ ನೋಂದಣಿಯಾಗಿರುವ ಸಂಘ ಸಂಸ್ಥೆಗಳಿಗೆ ವಾರ್ಷಿಕ ದಾಖಲಾತಿಗಳನ್ನು ಸಲ್ಲಿಸಲು ಸೂಚಿಸಲಾಗಿದೆ.

ಎಲ್ಲ ಸಂಘ ಸಂಸ್ಥೆಗಳು ಜೂನ್ 30ರೊಳಗೆ ಎಲ್ಲ ಅಗತ್ಯ ದಾಖಲೆಗಳನ್ನು ಸಹಕಾರ ಸಂಘಗಳ ಕಚೇರಿಗೆ ಸಲ್ಲಿಸಬೇಕು ಎಂದು ಸಹಕಾರ ಸಂಘಗಳ ಉಪನಿರ್ದೇಶಕರು ತಿಳಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT