ADVERTISEMENT

ಸರ್ಕಾರಿ ರಜೆಗೆ ವಿಶ್ವಕರ್ಮರ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 6:20 IST
Last Updated 18 ಸೆಪ್ಟೆಂಬರ್ 2013, 6:20 IST

ಗೌರಿಬಿದನೂರು: ವಿಶ್ವಕರ್ಮ ಜಯಂತಿಗೆ ಸರ್ಕಾರ ರಜೆ ಘೋಷಿಸು ವಂತೆ ಹಾಗೂ ವಿವಿಧ ಬೇಡಿಕೆ ಈಡೇರಿ ಸುವಂತೆ ಆಗ್ರಹಿಸಿ ತಾಲ್ಲೂಕಿನ ವಿಶ್ವ ಕರ್ಮ ಸಮುದಾಯದವರು ಮಂಗಳ ವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣೆಗೆ ನಡೆಸಿ ತಹಶೀಲ್ದಾರ್‌ಗೆ ಮನವಿ ಪತ್ರ ನೀಡಿದರು.

ಪಟ್ಟಣದ ಶನೇಶ್ವರ ದೇಗುಲದಿಂದ ಮೆರವಣಿಗೆ ಹೊರಟು ತಹಶೀಲ್ದಾರ್‌ ಡಾ.ಎನ್‌.ಭಾಸ್ಕರ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ವಿಶ್ವಕರ್ಮ ಜನಾಂಗದ ಮುಖಂಡ ಎನ್‌.ಎಂ. ರಾಧಾಕೃಷ್ಣ ಮಾತನಾಡಿ, ರಾಜ್ಯದಲ್ಲಿ ಸುಮಾರು 35 ಲಕ್ಷ್ಮ  ವಿಶ್ವ ಕರ್ಮ ಜನಸಂಖ್ಯೆಯಿದ್ದು,  ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ತೀರಾ ಹಿಂದುಳಿದಿದ್ದಾರೆ. ವಿಶ್ವಕರ್ಮ ಜನಾಂ ಗಕ್ಕೆ ಶೇ 3ರಷ್ಟು ಒಳ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.

ತಾಲ್ಲೂಕು ವಿಶ್ವಕರ್ಮ ಸಂಘದ ಕಾರ್ಯದರ್ಶಿ ಬಿ.ಆರ್‌. ಜನಾರ್ಧನಾ ಚಾರ್‌, ಪುರಸಭೆ ಮಾಜಿ ಸದಸ್ಯೆ ಪ್ರಮೀಳಾ ರಾಧಾಕೃಷ್ಣ, ಮುಖಂಡ ರಾದ ಚನ್ನಕೃಷ್ಣಚಾರ್‌, ವೆಂಕಟರಾಮ ಚಾರಿ, ಅಂಜಿನಾಚಾರ್‌, ಕೆ. ನಾರಾಯಣಾಚಾರ್‌, ಮಹೇಂದ್ರ, ಆಕಾಶ್‌ದೀಪ್‌ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.