ADVERTISEMENT

ಸರ್ಕಾರಿ ಶಾಲೆಯಲ್ಲಿ ಮಾತೃಪೂಜೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 8:45 IST
Last Updated 22 ಫೆಬ್ರುವರಿ 2012, 8:45 IST

ಚಿಂತಾಮಣಿ: ತಾಲ್ಲೂಕಿನ ಬುರುಡ ಗುಂಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎನ್‌ಪಿಇಜಿ ಇಎಲ್ ಯೋಜನೆಯಡಿ ಇತ್ತೀಚೆಗೆ ಮಾತೃ ಪೂಜೆ ಕಾರ್ಯಕ್ರಮ ನಡೆಯಿತು.

ವೈದ್ಯಾಧಿಕಾರಿ ರಾಮಚಂದ್ರಾರೆಡ್ಡಿ ಉದ್ಘಾಟಿಸಿ ಮಾತನಾಡಿ, ಭೂಮಿ ತಾಯಿ ಹಾಗೂ ಹೆತ್ತತಾಯಿ ಋಣ ಎಂದಿಗೂ ತೀರಿಸಲು ಆಗುವುದಿಲ್ಲ. ಪ್ರಕೃತಿಯನ್ನು ಸಂರಕ್ಷಿಸುವುದರ ಜತೆ ತಂದೆತಾಯಿಯನ್ನು ಗೌರವಿಸುವುದನ್ನು ಕಲಿಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮುಖ್ಯ ಶಿಕ್ಷಕ ಚೌಡಪ್ಪ ಮಾತನಾಡಿ ಶಾಲೆ ಅಭಿವೃದ್ಧಿಗೆ ಸಮುದಾಯ ಸ್ಪಂದಿಸಬೇಕಾಗಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಹೀದಾ ಬೇಗಂ, ಉಪಾಧ್ಯಕ್ಷೆ ಲಕ್ಷ್ಮೀ ದೇವಮ್ಮ, ಸದಸ್ಯೆ ಸಾವಿತ್ರಮ್ಮ ಮಾತನಾಡಿದರು.

ವಿದ್ಯಾರ್ಥಿಗಳು ಮಾತೃಪೂಜೆ ಮಾಡಿದರು. ಎಸ್‌ಡಿಎಂಸಿ ಅಧ್ಯಕ್ಷೆ ಬಿ.ಎಲ್.ಶಾಂತಮ್ಮ ಅಧ್ಯಕ್ಷತೆ ವಹಿ ಸಿದ್ದರು. ಸದಸ್ಯರಾದ ನಾಗಮ್ಮ, ಲಕ್ಷ್ಮೀದೇವಮ್ಮ, ಅಲ್ಮಾನಖಾನಂ, ಬಿ.ಎಸ್.ವೆಂಕಟರವಣಪ್ಪ, ಬಿ.ಸಿ.ರವಿ, ನಾರಾಯಣಸ್ವಾಮಿ, ಸಿಆರ್‌ಪಿ ಜಿ.ವಿ.ರಾಮಕೃಷ್ಣಪ್ಪ ಭಾಗವಹಿಸಿದ್ದರು. ಎಂ.ಶಬ್ಬಿರ್ ನಿರೂಪಿಸಿದರು. .ಸುಂದರೇಶ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.