ADVERTISEMENT

ಹಳ್ಳಿ ಅಭಿವೃದ್ಧಿಗೆ ಸುವರ್ಣಗ್ರಾಮ ಯೋಜನೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 7:30 IST
Last Updated 9 ಜುಲೈ 2012, 7:30 IST

ಕಡೂರು: ನಾಗೇನಹಳ್ಳಿಯನ್ನು ಸುವರ್ಣ ಗ್ರಾಮ ಯೋಜನೆಗೆ ಸೇರ್ಪಡೆಗೊಳಿಸಿದ್ದಲ್ಲಿ  ಗ್ರಾಮದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.

ನಾಗೇನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯ ಆವರಣದಲ್ಲಿ ಶನಿವಾರ ಜನಸ್ಪಂದನ ಕಾರ್ಯಕ್ರಮದಲ್ಲಿ ಫಲಾನುಭವಿಗೆ ಪ್ರಮಾಣ ಪತ್ರ ನೀಡಿ ಅವರು ಮಾತನಾಡಿದರು.

ಸರ್ವೆ ನಂ. 8ರಲ್ಲಿ 25ಎಕರೆ ಕಂದಾಯ ಇಲಾಖೆಯ ಭೂಮಿಯನ್ನು ಪಡೆದುಕೊಂಡು ಬಡವರಿಗೆ ನಿವೇಶನ ನೀಡಲು ಪ್ರಯತ್ನ ಮಾಡುತ್ತಿರು ವುದಾಗಿ ತಿಳಿಸಿದರು.

ಬರಗಾಲ ಕಾಡುತ್ತಿದ್ದು ಕುಡಿಯುವ ನೀರು,ಜಾನುವಾರುಗಳ ಮೇವಿನ ಕೊರತೆಯಿಂದ ರೈತರು ಕಂಗಲಾಗಿದ್ದು, ಸರ್ಕಾರ ಮೇವಿನ ಸಮಸ್ಯೆಯನ್ನು ಪರಿಹರಿಸಲು ಮುಂದಾಗಬೇಕೆಂದು ಗ್ರಾಮದ ಮುಖಂಡ ಗಂಗಾಧರಪ್ಪ ಶಾಸಕರನ್ನು ಪ್ರಶ್ನಿಸಿದರು. ಶಾಸಕರು ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ನಾಗೇನಹಳ್ಳಿಯಲ್ಲಿ ಮೇವು ಬ್ಯಾಂಕ್ ತೆರೆಯಲು ಅವಕಾಶ ಮಾಡಿಕೊಡಲು ಆದೇಶ ನೀಡುವುದಾಗಿ ಭರವಸೆ ನೀಡಿದರು.   
ಸಖರಾಯಪಟ್ಟಣ ಜಿ.ಪಂ.ಸದಸ್ಯ ಕಲ್ಮರುಡಪ್ಪ ಮಾತನಾಡಿದರು.

ತಹಶೀಲ್ದಾರ್ ಬಿ.ಆರ್.ರೂಪ ಮಾತನಾಡಿ, ಇಲ್ಲಿನ ಗ್ರಾಮಸ್ಥರ ಅನುಕೂಲಕ್ಕಾಗಿ ನೆಮ್ಮದಿ ಕೇಂದ್ರವನ್ನು ನಾಡಕಚೇರಿಗೆ ಸ್ಥಳಾಂತರಿಸುವುದರಿಂದ ಕಂದಾಯ ಇಲಾಖೆಯ ಕೆಲಸಗಳನ್ನು ಶೀಘ್ರವಾಗಿ ಮಾಡಿಸಿಕೊಳ್ಳಲು ನೆರ ವಾಗುತ್ತದೆ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುನೀತಾಚಿದಾನಂದ, ಜಿ.ಪಂ.ಮಾಜಿ ಅಧ್ಯಕ್ಷೆ ಪ್ರಫುಲ್ಲಾ ಮಂಜುನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಅಣ್ಣಯ್ಯ, ಯೋಗೀಶ್,ಮಹೇಶ್, ಅಧಿಕಾರಿಗಳಾದ ಶಿವರಾಂ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಬಸವ ರಾಜನಾಯ್ಕ, ಎಪಿಎಂಸಿ ಅಧ್ಯಕ್ಷ ಚಿಕ್ಕ ದೇವನೂರುರವಿ ಹಾಗೂ ಗ್ರಾಮಸ್ಥರು ಇದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.