ADVERTISEMENT

ಉಡುಗೊರೆ ಹೆಸರಿನಲ್ಲಿ ₹ 1.15 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 4:41 IST
Last Updated 4 ಆಗಸ್ಟ್ 2022, 4:41 IST

ಚಿಕ್ಕಬಳ್ಳಾಪುರ:ಆನ್‌ಲೈನ್ ವಂಚಕರು ಉಡುಗೊರೆ ಹೆಸರಿನಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಜಿ.ವಿ.ಮಾನಸ ಅವರಿಗೆ ₹ 1.15 ಲಕ್ಷ ವಂಚಿಸಿದ್ದಾರೆ. ಈ ಸಂಬಂಧ ಅವರು ಸಿಇಎನ್ ಪೊಲೀಸರಿಗೆ ದೂರು ನೀಡಿದ್ದಾರೆ.

‘DERMA CO’ ನಿಂದಕಾಸ್ಮಿಟಿಕ್ಸ್ ತರಿಸಿಕೊಂಡಿದ್ದೆ. ನಂತರ ನನಗೆ ಕರೆ ಮಾಡಿ ನೀವು ನಮ್ಮಿಂದ ಕಾಸ್ಮಿಟಿಕ್ಸ್ ತರಿಸಿರುವುದರಿಂದ ನಿಮಗೆ ಉಡುಗೊರೆಯಾಗಿ ಐ ಫೋನ್ ಬಂದಿದೆ. ಅದಕ್ಕೆ ನೀವು ನಮ್ಮಿಂದ
₹ 5000 ಮೌಲ್ಯದ ವಸ್ತುಗಳನ್ನು ಖರೀದಿಸಬೇಕು ಎಂದುರ. ಅವರ ಮಾತು ನಂಬಿದೆ. ಅವರು ಹೇಳಿದ ಪ್ರಕಾರ ನಡೆದುಕೊಂಡೆ. ಹಂತ ಹಂತವಾಗಿ ನನ್ನ ಖಾತೆಯಿಂದ ₹ 1,15,585 ವರ್ಗಾಯಿಸಿಕೊಂಡಿ ದ್ದಾರೆ.ಆರೋಪಿಯನ್ನು ಪತ್ತೆ ಮಾಡಿ ಹಣ ವಾಪಸ್ ಕೊಡಿಸಿ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT