ಬಾಗೇಪಲ್ಲಿ: ಪಟ್ಟಣದ ಗ್ರಾಮದೇವತೆ ಗಂಗಮ್ಮ ದೇವಿಯ ಧರ್ಮರಾಯ ಕರಗ ಮಹೋತ್ಸವವು ಮೇ 8 ರಿಂದ 11 ರವರೆಗೆ ನಡೆಯಲಿದೆ ಎಂದು ಕರಗ ಮಹೋತ್ಸವದ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಪಟ್ಟಣದ 23ನೇ ವಾರ್ಡ್‌ನ ಯರ್ರ ಕಾಲುವೆ ಬಳಿ ಮೇ 8ರ ಗುರುವಾರ ರಾತ್ರಿ ಹಸಿಕರಗ ನಡೆಯಲಿದೆ. ಮೇ 9ರ ಶುಕ್ರವಾರ ಬೆಳಗ್ಗೆ ಪಟ್ಟಣದ ವಿವಿಧ ವಾರ್ಡ್‍ಗಳ ಮಹಿಳೆಯರಿಂದ ತಂಬಿಟ್ಟಿನ ದೀಪೋತ್ಸವ, ಮಧ್ಯಾಹ್ನ 3 ಗಂಟೆಗೆ ಸ್ಮಶಾನ ರಸ್ತೆಯ ಸಪ್ತಗಿರಿ ಮಿನರಲ್ಸ್ ವಾಟರ್ ಹಿಂಭಾಗ ಜಾರುಟ್ಲು ಪರಿಷೆ ಹಮ್ಮಿಕೊಳ್ಳಲಾಗಿದೆ.
ಮೇ 10ರ ಶನಿವಾರ ರಾತ್ರಿ 9 ಗಂಟೆಗೆ ಕರಗ ಮಹೋತ್ಸವದ ಅಂಗವಾಗಿ ಗಂಗಮ್ಮದೇವಿಗೆ ಹೂವಿನ ಅಲಂಕಾರ, ಹೂವಿನ ಕರಗ ನಡೆಯಲಿದೆ. ಮೇ 11ರ ಭಾನುವಾರ ರಾತ್ರಿ 9 ಗಂಟೆಗೆ ಒನಕೆ ಕರಗ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.