ಚಿಕ್ಕಬಳ್ಳಾಪುರ: ಬಿಎಸ್‌ಪಿ ಎಲ್ಲ ಜಾತಿ–ಧರ್ಮಗಳಿಗೆ ಸೇರಿದ್ದು. ಪಕ್ಷದಲ್ಲಿ ಒಂದೇ ಜಾತಿ ಅವರಿಗೆ ಆದ್ಯತೆ ಕೊಟ್ಟಿದ್ದೇವೆ ಅಂತ ನಾವೆಲ್ಲಿಯೂ ಹೇಳುವುದಿಲ್ಲ. ಅದಕ್ಕೆ ನಮ್ಮ ಮಾಯಾವತಿ ಅಕ್ಕ ಉತ್ತರ ಪ್ರದೇಶದ ಚುನಾವಣೆಯಲ್ಲಿ 21 ಮಂದಿ ಬ್ರಾಹ್ಮಣರಿಗೆ, 15 ಮುಸ್ಲಿಮರಿಗೆ ಟಿಕೆಟ್ ಕೊಟ್ಟಿದ್ದಾರೆ’ ಎಂದು ಬಿಎಸ್‌ಪಿ ರಾಜ್ಯ ಘಟಕದ ಕಾರ್ಯದರ್ಶಿ ಹೆಣ್ಣೂರು ಲಕ್ಷ್ಮಿನಾರಾಯಣ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆಗ ಪತ್ರಕರ್ತರೊಬ್ಬರು, ‘ಯಾವ ಜಾತಿಗೂ ಆದ್ಯತೆ ಕೊಟ್ಟಿಲ್ಲ ಅಂದ್ಮೇಲೆ ಬ್ರಾಹ್ಮಣರಿಗೆ, ಮುಸ್ಲಿಮರಿಗೆ ಅಷ್ಟೇ ಯಾಕೆ ಟಿಕೆಟ್ ಕೊಟ್ಟಿದ್ದೀರಿ. ಬೇರೆ ಜಾತಿಯವರಿಗೆ ಏಕೆ ನೀಡಿಲ್ಲ’ ಎಂದು ಪ್ರಶ್ನೆ ಬಿಟ್ಟರು. ಅದಕ್ಕೆ ಪ್ರತ್ಯುತ್ತರ ನೀಡಿದ ಹೆಣ್ಣೂರು ಲಕ್ಷ್ಮಿನಾರಾಯಣ, ‘ಹಾಗೇನಿಲ್ಲ, ನಮ್ಮ ಪಕ್ಷದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುತ್ತಾರೆ. ಆಯಾ ಜಾತಿ, ಧರ್ಮ, ಜನಾಂಗಕ್ಕೆ ಅನುಸಾರವಾಗಿ ಟಿಕೆಟ್ ಹಂಚಿಕೆ ಮಾಡಿದ್ದಾರೆ. ಎಲ್ಲರಿಗೂ ಟಿಕೆಟ್ ಸಿಕ್ಕಿದೆ’ ಎಂದು ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.