ADVERTISEMENT

ಚಿಕ್ಕಬಳ್ಳಾಪುರದಲ್ಲಿ ಮತ್ತೆ 52 ಸೋಂಕಿತರು ಪತ್ತೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2020, 7:02 IST
Last Updated 13 ಆಗಸ್ಟ್ 2020, 7:02 IST

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮಂಗಳವಾರ ಒಟ್ಟು 52 ಹೊಸ ಕೊರೊನಾ ಸೋಂಕಿತರು ಪತ್ತರಯಾಗಿದ್ದು, ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 2698ಕ್ಕೇರಿದೆ.

ಕೋವಿಡ್– 19 ಪ್ರಕರಣಗಳು ಇಳಿಕೆ ಆಗುತ್ತಿದ್ದು, ಅಧಿಕಾರಿಗಳು ‌ಮತ್ತು ನಾಗರಿಕರು ನಿಟ್ಟುಸಿರು ಬಿಡುವಂತಾಗಿದೆ. ಆದರೂ ಅಧಿಕಾರಿಗಳು ‌ನಿರಂತರವಾಗಿ ಕಾರ್ಯನಿರ್ವಹಿಸುತ್ತಾ ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿನ ಜನರಲ್ಲಿ ಜಾಗೃತಿ ಮೂಡಿಸಲು‌ ಮುಂದಾಗಿದ್ದಾರೆ.

ನಗರ ಮತ್ತು ಗ್ರಾಮೀಣ ಭಾಗದ ಬಹುತೇಕ ಸಾರ್ವಜನಿಕ ಸ್ಥಳಗಳು, ಸರ್ಕಾರಿ ಕಚೇರಿಗಳು, ದೇವಸ್ಥಾನ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಬಳಕೆ ಮಾಡಿ, ನಡುವಿನ ಅಂತರವನ್ನು ‌ಕಾಪಾಡುವಂತೆ ಅಧಿಕಾರಿಗಳು ‌ಜಾಗೃತಿ‌ ಮೂಡಿಸುತ್ತಿದ್ದಾರೆ.

ADVERTISEMENT

ಚಿಂತಾಮಣಿ: 14 ಜನರಿಗೆ ಸೋಂಕು

ಚಿಂತಾಮಣಿ: ರ‍್ಯಾಪಿಡ್ ಆಂಟಿಜೆನ್ ಟೆಸ್ಟ್ ಮತ್ತು ಆರ್‌ಟಿಪಿಸಿಎಲ್ ಪರೀಕ್ಷೆಯಿಂದ ನಗರದಲ್ಲಿ 12 ಹಾಗೂ ಗ್ರಾಮೀಣ ಭಾಗದಲ್ಲಿ 2 ಮಂದಿ ಸೇರಿ ಬುಧವಾರ ಒಟ್ಟು 14 ಮಂದಿ ಕೊರೊನಾ ಸೋಂಕು ದೃಢಪಟ್ಟಿದೆ.

ನಗರದ ಎನ್ಎನ್‌ಟಿ ರಸ್ತೆಯಲ್ಲಿ 1, ವೆಂಕಟೇಶ್ವರ ಬಡಾವಣೆಯಲ್ಲಿ 3, ಗುಂಡಪ್ಪ ಬಡಾವಣೆಯಲ್ಲಿ 2, ದೊಡ್ಡಪೇಟೆಯಲ್ಲಿ 2, ಚೌಡರೆಡ್ಡಿ ಪಾಳ್ಯದಲ್ಲಿ 1, ಹಳೇಪೇಟೆಯಲ್ಲಿ 1, ಅಶ್ವಿನಿ ಬಡಾವಣೆಯಲ್ಲಿ ಒಬ್ಬರಿಗೆ ಕೊರೊನಾ ಸೋಂಕು ತಗುಲಿದೆ.

ತಾಲ್ಲೂಕಿನ ಸಂತೆಕಲ್ಲಹಳ್ಳಿಯಲ್ಲಿ 1, ಕುರುಬೂರಿನಲ್ಲಿ ಒಬ್ಬರು ಸೋಂಕಿಗೆ ಒಳಗಾಗಿದ್ದಾರೆ. ತಾಲ್ಲೂಕು ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡು ಸೀಲ್‌ಡೌನ್ ಮಾಡಿದ್ದ ಕಚೇರಿಗೆ ಬುಧವಾರ ಔಷಧಿ ಸಂಪಡಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.