ಶಿಡ್ಲಘಟ್ಟ: ತಾಲ್ಲೂಕಿನ ಮುತ್ತೂರಿನಿಂದ ಮೇಲೂರಿನ ಕಡೆಗೆ ಸಂಚರಿಸುವ ರಸ್ತೆಯಲ್ಲಿ ಕಾರೊಂದು ಸುಟ್ಟು ಕರಕಲಾಗಿದ್ದು, ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ರಸ್ತೆಯಲ್ಲೆ ಸುಟ್ಟುಹೋಗಿರುವ ವಿದ್ಯುತ್ ಚಾಲಿತ ಕಾರಿನ ಸಂಖ್ಯಾಫಲಕ ಅರ್ಧ ಮುರಿದುಹೋಗಿದ್ದು, ಕೆ.ಎ. 01.ಎಂಎಕ್ಸ್ 64 ಎಂಬ ಸಂಖ್ಯೆಗಳು ಮಾತ್ರ ಕಾಣುತ್ತಿವೆ. ಮುಂಭಾಗದಲ್ಲಿನ ಸಂಖ್ಯಾಫಲಕ ಸಂಪೂರ್ಣವಾಗಿ ಸುಟ್ಟುಹೋಗಿದೆ. ಮುಂದಿನ ಎರಡು ಅಂಕಿಗಳಿರುವ ಸಂಖ್ಯಾಫಲಕ ಮುರಿದು ಹೋಗಿರುವುದರಿಂದ ಈ ಕಾರು ಯಾರಿಗೆ ಸೇರಿದ್ದು, ಯಾವ ಕಾರಣಕ್ಕಾಗಿ ಇಲ್ಲಿ ಸುಟ್ಟುಹೋಗಿದೆ, ಯಾರಾದರೂ ಸುಟ್ಟುಹಾಕಿದ್ದಾರೆಯೇ? ಅಥವಾ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆಯೇ ಎನ್ನುವ ಅನುಮಾನಗಳು ಮೂಡಿದ್ದು, ಪೊಲೀಸರ ತನಿಖೆಯಿಂದಷ್ಟೆ ವಾಸ್ತವಾಂಶ ಗೊತ್ತಾಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.