ADVERTISEMENT

ಬಳಕೆಗೆ ಬಾರದ ಘಟಕಗಳು: ಮಕ್ಕಳಿಗೆ ನೀರು ತರುವ ಕೆಲಸ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 4:36 IST
Last Updated 19 ಆಗಸ್ಟ್ 2022, 4:36 IST
ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಡಿಕಲ್ಲು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕದಿಂದ ಶಾಲೆಗೆ ನೀರು ತರುತ್ತಿರುವುದು
ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಡಿಕಲ್ಲು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕದಿಂದ ಶಾಲೆಗೆ ನೀರು ತರುತ್ತಿರುವುದು   

ಮಂಡಿಕಲ್ಲು (ಚಿಕ್ಕಬಳ್ಳಾಪುರ): ತಾಲ್ಲೂಕಿನ ಮಂಡಿಕಲ್ಲು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ನಿತ್ಯ ಶಾಲೆಯಿಂದ 500 ಮೀಟರ್ ದೂರದ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ತರುತ್ತಿದ್ದಾರೆ! ಮಕ್ಕಳು ನೀರಿನ ಕ್ಯಾನ್‌ಗಳನ್ನು ಹಿಡಿದು ಸಾಗುವಾಗ ದಾರಿ ಹೋಕರು ಮತ್ತು ಸಾರ್ವಜನಿಕರು ಮಕ್ಕಳಿಗೆ ಏಕೆ ಈ ಕೆಲಸ ಎಂದು ಮಾತನಾಡುತ್ತಿದ್ದಾರೆ.

ಈ ಶಾಲೆಗೆ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮತ್ತು ಗ್ರಾಮ ಪಂಚಾಯಿತಿಯಿಂದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನೀಡಲಾಗಿದೆ. ಹೀಗಿದ್ದರೂ ಗ್ರಾಮದಲ್ಲಿರುವ ನೀರಿನ ಘಟಕದಿಂದ ಮಕ್ಕಳ ಕೈಯಲ್ಲಿ ನೀರು ತರಿಸಲಾಗುತ್ತಿದೆ

ಈ ಬಗ್ಗೆ ಶಾಲೆಯ ಶಿಕ್ಷಕರನ್ನು ವಿಚಾರಿಸಿದರೆ ‘ಅದನ್ನು ಹೇಗೆ ಆಪರೇಟ್ ಮಾಡಬೇಕು ಎಂದು ನಮಗೆ ಹೇಳಿಕೊಟ್ಟಿಲ್ಲ’ ಎನ್ನುತ್ತಾರೆ.

ADVERTISEMENT

ಅಚ್ಚರಿ ಎಂದರೆ ನೀರಿನ ಫಿಲ್ಟರ್‌ಗಳನ್ನು ದಾನಿಗಳು ಮತ್ತು ಪರಿಷತ್ ಸದಸ್ಯರು ಹೇಗೆ ಕೊಟ್ಟಿದ್ದರೊ ಹಾಗೆಯೇ ಇವೆ. ಇವುಗಳು ಬಳಕೆಯೇ ಆಗಿಲ್ಲ ಎನ್ನುವುದು ಎದ್ದು ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.