ADVERTISEMENT

ಗೌರಿಬಿದನೂರು | ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದ ಶಿಕ್ಷಕರು

​ಪ್ರಜಾವಾಣಿ ವಾರ್ತೆ
Published 30 ಮೇ 2025, 14:30 IST
Last Updated 30 ಮೇ 2025, 14:30 IST
ಅಲೀಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಸಿಹಿ ಹಂಚಿ ಸ್ವಾಗತ ಕೋರಲಾಯಿತು
ಅಲೀಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಸಿಹಿ ಹಂಚಿ ಸ್ವಾಗತ ಕೋರಲಾಯಿತು   

ಗೌರಿಬಿದನೂರು: ಬೇಸಿಗೆ ರಜೆ ಕಳೆದು ವಿದ್ಯಾರ್ಥಿಗಳು ಶುಕ್ರವಾರ ಖುಷಿಯಾಗಿಯೇ ಶಾಲೆ ಪ್ರವೇಶಿಸಿದರು.

ನಗರದ ಕೋಟೆ ಬಾಲಕಿಯರ ಶಾಲೆ, ನಾಗಸಂದ್ರ, ಅಲೀಪುರ, ಸಬ್ಬನಹಳ್ಳಿ, ಹಿರೇಬಿದನೂರು ಶಾಲೆಗಳು ಸೇರಿದಂತೆ ತಾಲ್ಲೂಕಿನ ಎಲ್ಲೆಡೆ ಶಾಲೆಗಳನ್ನು ಬಾಳೆ ಕಂದು, ತಳಿರು ತೋರಣಗಳಿಂದ ಅಲಂಕೃತಗೊಳಿಸಲಾಗಿತ್ತು. ಶಾಲೆಗಳಿಗೆ ಶಿಕ್ಷಕರು ಮತ್ತು ಎಸ್‌ಡಿಎಂಸಿ ಸದಸ್ಯರು ವಿದ್ಯಾರ್ಥಿಗಳಿಗೆ ಹೂವು, ಸಿಹಿ, ಪುಸ್ತಕ ಮತ್ತು ಸಮವಸ್ತ್ರಗಳನ್ನು ನೀಡಿ ಬರಮಾಡಿಕೊಂಡರು.

ರಜೆ ಮುಗಿಸಿದ ವಿದ್ಯಾರ್ಥಿಗಳು ಉತ್ಸಾಹದಿಂದಲೇ ಶಾಲೆಯತ್ತ ಹೆಜ್ಜೆಹಾಕಿದರು. ಶಾಲೆಯಲ್ಲಿ ಸಿಹಿ ತಿನಿಸು ಮಾಡಿ ಸ್ವಾಗತ ಕೋರಲಾಯಿತು ಎಂದು ಅಲೀಪುರ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ನವೀನ್ ತಿಳಿಸಿದರು.

ADVERTISEMENT
ಗೌರಿಬಿದನೂರು ಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಸಮವಸ್ತ್ರ ನೀಡಲಾಯಿತು
ನಾಗಸಂದ್ರ ಸರ್ಕಾರಿ ಶಾಲೆಯಲ್ಲಿ ತಳಿರು ತೋರಣಗಳಿಂದ ಅಲಂಕರಿಸಿ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.