ಚೇಳೂರು: ಚೇಳೂರು ಪೋಲಿಸ್ ಠಾಣಾ ವ್ಯಾಪ್ತಿಯ ಗೌನಿವಾರಪಲ್ಲಿಯಲ್ಲಿ ನಾಲ್ಕು ವರ್ಷದ ಮಗು ಮೇಲೆ ಟ್ರ್ಯಾಕ್ಟರ್ ಹರಿದು ಮೃತಪಟ್ಟಿದೆ.
ಗೌನಿವಾರಪಲ್ಲಿ ಗ್ರಾಮದ ಪ್ರಭಾಕರ್ ಎಂಬುವವರ ಮಗ ಜಿ.ಪಿ.ಚೇತನ್ ಗೌಡ (4), ಮಗು ಮನೆ ಮುಂದೆ ನಿಂತಿದ್ದಾಗ ಸೋಮಶೇಖರ್ ಎಂಬುವವರು ಟ್ರ್ಯಾಕ್ಟರ್ ಅನ್ನು ಅತಿ ವೇಗವಾಗಿ ಚಾಲನೆ ಮಾಡಿದ್ದಾರೆ. ಆ ವೇಳೆ ಟ್ರ್ಯಾಕ್ಟರ್ ಚಕ್ರ ಮಗುವಿಗೆ ತಾಗಿ, ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದೆ ಎಂದು ಪ್ರಭಾಕರ್ ಚೇಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.