ADVERTISEMENT

ಚಿಂತಾಮಣಿ: ಕಲ್ಯಾಣಿಗೆ ಬಿದ್ದು ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 14:22 IST
Last Updated 8 ಏಪ್ರಿಲ್ 2025, 14:22 IST
ಇಲಿಯಾಜ್
ಇಲಿಯಾಜ್   

ಚಿಂತಾಮಣಿ: ತಾಲ್ಲೂಕಿನ ಮುರುಗಮಲ್ಲ ಗ್ರಾಮದ ಕಲ್ಯಾಣಿಯಲ್ಲಿ ಬಾಲಕನೊಬ್ಬ ಸೋಮವಾರ ಮುಳುಗಿದ್ದು, ಮಂಗಳವಾರ ಬಾಲಕನ ಶವ ಪತ್ತೆಯಾಗಿದೆ.

ಮೃತ ಬಾಲಕನನ್ನು ಬೆಂಗಳೂರಿನ ಕೆ.ಆರ್ ಪುರಂ ನಿವಾಸಿ ಇಲಿಯಾಜ್ (14) ಎಂದು ಗುರುತಿಸಲಾಗಿದೆ. 10 ಜನರೊಂದಿಗೆ ದರ್ಗಾಗೆ ಆಗಮಿಸಿದ್ದ ಬಾಲಕ ಕಲ್ಯಾಣಿಯಲ್ಲಿ ಸ್ನಾನ ಮಾಡಲು ಹೋಗಿ ಕಾಲು ಜಾರಿಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಪೊಲೀಸರು ಬಾಲಕನ ದೇಹಕ್ಕಾಗಿ ಸೋಮವಾರ ಹುಡುಕಾಡಿದರೂ ಸಿಕ್ಕಿರಲಿಲ್ಲ. ಮಂಗಳವಾರ ಮೃತದೇಹ ಪತ್ತೆಯಾಗಿದೆ.

ADVERTISEMENT

ಕೆಂಚಾರ್ಲಹಳ್ಳಿಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.