ADVERTISEMENT

ಅಮೆಜಾನ್ ಹೆಸರಿನಲ್ಲಿ ಹೂಡಿಕೆ: ₹ 11 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2022, 6:24 IST
Last Updated 16 ಅಕ್ಟೋಬರ್ 2022, 6:24 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚಿಕ್ಕಬಳ್ಳಾಪುರ:ಅಮೆಜಾನ್ ಇ–ಕಾಮರ್ಸ್‌ ವಸ್ತುಗಳ ಮೇಲೆ ಹೂಡಿಕೆ ಮಾಡಿದರೆ ಉತ್ತಮ ಲಾಭ ದೊರೆಯುತ್ತದೆ ಎಂದು ನಂಬಿಸಿ ಆನ್‌ಲೈನ್ ವಂಚಕರು ತಾಲ್ಲೂಕಿನ ಹೊಸಹುಡ್ಯ ಗ್ರಾಮದ ಎನ್.ಮಹೇಶ್ ಅವರಿಗೆ ₹11,71,313 ವಂಚಿಸಿದ್ದಾರೆ. ಈ ಸಂಬಂಧ ಮಹೇಶ್ ನಗರದ ಸಿಇಎನ್ ‍ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮಹೇಶ್ ಕೊರಿಯರ್ಕಂಪನಿಯಲ್ಲಿ ಕೆಲಸ ಮಾಡುವರು. ‘ಮೊಬೈಲ್ ನಲ್ಲಿ ಹುಡುಕಾಟ ನಡೆಸಿದಾಗ ಟೆಲಿಗ್ರಾಂ ಸಾಮಾಜಿಕ ಜಾಲತಾಣದಲ್ಲಿ ‘work from home ಎಂದು ಅಮೆಜಾನ್ ಇ–ಕಾಮರ್ಸ್‌ನಲ್ಲಿ ವಸ್ತುಗಳ ಮೇಲೆ ಹೂಡಿಕೆ ಮಾಡಿದರೆ ನಿಮಗೆ ಉತ್ತಮಲಾಭ ದೊರೆಯುತ್ತದೆ ಎಂದು ಇತ್ತು. ನಾನು ಇದನ್ನು ನಂಬಿದೆ.

₹ 500 ಹೂಡಿಕೆ ಮಾಡಿದೆ. ನಂತರ ಅದೇ ದಿನ ನನಗೆ ₹ 5,396ಅಸಲು ಮತ್ತು ಕಮಿಷನ್ ಖಾತೆಗೆ ವರ್ಗಾಯಿಸಿದರು. ನಂತರ ಮತ್ತಷ್ಟು ಹೂಡಿಕೆ ಮಾಡಿದೆ. ನನ್ನ ಖಾತೆಯಲ್ಲಿ ಹಣ ಇರುವಂತೆ ತೋರಿಸುತ್ತಿತ್ತು. ಆದರೆ ಡ್ರಾ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಒಮ್ಮೆಯೇ ಹಣ ಡ್ರಾ ಮಾಡೋಣ ಎಂದು ಸುಮ್ಮನಾದೆ. ನಂತರ ನನ್ನಸ್ನೇಹಿತರಿಗೆ ಹಣ ನೀಡಿ ಅವರಖಾತೆಗಳಿಂದ ಹಣ ಹೂಡಿಕೆ ಮಾಡಿಸಿದೆ.
ಹೀಗೆ ಒಟ್ಟು ₹11,71,313 ಹೂಡಿಕೆ ಮಾಡಿದೆ. ನನ್ನ ಲಾಗಿನ್ ಮೂಲಕ ನೋಡಿದಾಗ ಅಸಲು ಮತ್ತು ಕಮಿಷನ್ ಸೇರಿ ₹22,48,596 ಬಂದಂತೆ ತೋರಿಸುತ್ತಿತ್ತು. ಆದರೆ ಡ್ರಾ ಮಾಡಲು ಸಾಧ್ಯವಾಗಲಿಲ್ಲ. ಹಣ ಡ್ರಾ ಮಾಡಲು ಹೋದಾಗ ಶೇ 10ರಷ್ಟು ತೆರಿಗೆ, ಭದ್ರತಾ ಹಣ ಎಂದು ₹ 45 ಸಾವಿರ ಕಟ್ಟಬೇಕು ಎಂದು ತೋರಿಸುತ್ತಿದೆ. ಕಮಿಷನ್ ಬರುತ್ತದೆ ಎಂದು ನಂಬಿಸಿ ನನಗೆ ವಂಚಿಸಿರುವವರ ವಿರುದ್ಧ ಕ್ರಮ ಜರುಗಿಸಿ ಎಂದು ದೂರಿನಲ್ಲಿ ಕೋರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.