ADVERTISEMENT

‘ಜೀವನದಲ್ಲಿ ಗುರಿ ಸಾಧನೆಗೆ ಶ್ರದ್ಧೆ ಇರಲಿ’

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 2:07 IST
Last Updated 18 ಜನವರಿ 2021, 2:07 IST
ಚಿಂತಾಮಣಿಯಲ್ಲಿ ಸಾರಿಗೆ ಸಂಸ್ಥೆಯ ನೌಕರರ ಪತ್ತಿನ ಸಹಕಾರ ಸಂಘದಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು
ಚಿಂತಾಮಣಿಯಲ್ಲಿ ಸಾರಿಗೆ ಸಂಸ್ಥೆಯ ನೌಕರರ ಪತ್ತಿನ ಸಹಕಾರ ಸಂಘದಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು   

ಚಿಂತಾಮಣಿ: ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯೊಂದಿಗೆ ಶ್ರದ್ಧೆ ಮತ್ತು ಶ್ರಮವಹಿಸಿ ವ್ಯಾಸಂಗ ಮಾಡಿದರೆ ಖಂಡಿತವಾಗಿ ಗುರಿ ಮುಟ್ಟಬಹುದು ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಬಿ. ಬಸವರಾಜು ಅಭಿಪ್ರಾಯಪಟ್ಟರು.

ನಗರದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಂಸ್ಥೆಯ ನೌಕರರ ಪತ್ತಿನ ಸಹಕಾರ ಸಂಘದ 2019-20ನೇ ಸಾಲಿನ ಸಾಮಾನ್ಯ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.

ಪತ್ತಿನ ಸಹಕಾರ ಸಂಘದ ನಿರ್ದೇಶಕ ಎಂ. ಮಂಜುನಾಥ್ ಮಾತನಾಡಿ, ಸಾರಿಗೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರ ಮಕ್ಕಳಿಗೆ ವಿದ್ಯಾಭ್ಯಾಸ ಮತ್ತು ಇತರೆ ವೆಚ್ಚ ಭರಿಸಲು ಪತ್ತಿನ ಸಹಕಾರ ಸಂಘ ಸಹಕಾರ ನೀಡುತ್ತಿದೆ ಎಂದರು.

ADVERTISEMENT

ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಗಳಿಸಿರುವ ಸಾರಿಗೆ ಸಂಸ್ಥೆಯ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಚಿಕ್ಕಬಳ್ಳಾಪುರ ವಿಭಾಗೀಯ ಸಂಚಲನಾಧಿಕಾರಿ ಕೃಷ್ಣಮೂರ್ತಿ, ವಿಭಾಗೀಯ ತಾಂತ್ರಿಕ ಶಿಲ್ಪಿ ನವೀನ್ ಕುಮಾರ್, ಡಿಪೊ ವ್ಯವಸ್ಥಾಪಕ ಅಪ್ಪಿರೆಡ್ಡಿ, ಅಂಕಿ-ಅಂಶ ಅಧಿಕಾರಿ ಶ್ರೀಧರ್, ಆಡಳಿತಾಧಿಕಾರಿ ಶಂಕರನಾರಾಯಣ್, ಅಧಿಕಾರಿಗಳಾದ ರುದ್ರಮೂರ್ತಿ, ಆದಿನಾರಾಯಣ, ವೀರಭದ್ರಪ್ಪ, ವೆಂಕಟರಮಣಪ್ಪ, ಸಹಕಾರ ಸಂಘದ ಸಂಸ್ಥಾಪಕ ಮು. ಪಾಪಣ್ಣ, ಉಪಾಧ್ಯಕ್ಷ ಬಿ. ವೆಂಕಟಾಚಲಪತಿ, ಗೋವಿಂದಪ್ಪ, ಸಿ. ನಂಜುಂಡಬಾಬು, ಸಿ.ಆರ್. ಮಂಜುನಾಥ್, ಮಜರುಲ್ಲಾ ಷರೀಫ್, ಕೆ.ಎನ್. ದೇವೇಂದ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.