ADVERTISEMENT

ಟ್ರ್ಯಾಕ್ಟರ್‌ಗೆ ಸಿಲುಕಿ ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 28 ಜೂನ್ 2025, 16:30 IST
Last Updated 28 ಜೂನ್ 2025, 16:30 IST
ಮಹಿಳೆ ಸಾವಿಗೆ ಕಾರಣವಾದ ಟ್ರ್ಯಾಕ್ಟರ್‌
ಮಹಿಳೆ ಸಾವಿಗೆ ಕಾರಣವಾದ ಟ್ರ್ಯಾಕ್ಟರ್‌   

ಗುಡಿಬಂಡೆ: ತಾಲ್ಲೂಕಿನ ಬೀಚಗಾನಹಳ್ಳಿ ಕ್ರಾಸ್- ಪೆಮ್ಮನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆ ಪೆಮ್ಮನಹಳ್ಳಿ ಕ್ರಾಸ್‌ನಲ್ಲಿ ಶನಿವಾರ ಮಧ್ಯಾಹ್ನ ಟ್ರ್ಯಾಕ್ಟರ್‌ ಹಿಂಬದಿ ಚಕ್ರಕ್ಕೆ ಸಿಲುಕಿ ಮಹಿಳೆ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.

ಮೃತ ಮಹಿಳೆಯನ್ನು ಪೆಮ್ಮನಹಳ್ಳಿ ಗ್ರಾಮದ ತಿಪ್ಪಕ್ಕ (50) ಎಂದು ಗುರುತಿಸಲಾಗಿದೆ.

ಗುಡಿಬಂಡೆ ತಾಲ್ಲೂಕಿನ ಜಂಬಿಗೇಮರದಹಳ್ಳಿಯಿಂದ ಯರ್ರಲಕ್ಕೇನಹಳ್ಳಿ ಕ್ರಾಸ್‌ನ ಆಯಿಲ್ ಪ್ಯಾಕ್ಟರಿಗೆ ನೀರು ಸರಬರಾಜು ಮಾಡುವ ಟ್ರ್ಯಾಕ್ಟರ್‌ನಲ್ಲಿ ಬೀಚಗಾನಹಳ್ಳಿ ಕ್ರಾಸ್‌ಗೆ ಹೋಗಲು ಪೆಮ್ಮನಹಳ್ಳಿ ಗ್ರಾಮದಲ್ಲಿ ಟ್ರ್ಯಾಕ್ಟರ್‌ ಹತ್ತಿದ್ದರು.

ADVERTISEMENT

ಪೆಮ್ಮನಹಳ್ಳಿ ಕ್ರಾಸ್‌ನ ಹಂಪ್ಸ್‌ನಲ್ಲಿ ಟ್ರ್ಯಾಕ್ಟರ್ ಮೇಲಕ್ಕೆ ಎಗರಿದಾಗ ತಿಪ್ಪಕ್ಕ ಕೆಳಗೆ ಬಿದ್ದು ಹಿಂಬದಿ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.

ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಗುಡಿಬಂಡೆ ಪೊಲೀಸ್ ಭೇಟಿ ಪರಿಶೀಲನೆ ನಡೆಸಿದರು. ತಿಪ್ಪಕ್ಕ ಅವರ ಮಗ ಗೌತಮ್ ಗುಡಿಬಂಡೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನೀರಿನ ಟ್ರ್ಯಾಕ್ಟರ್‌ ನೀರಿನ ಟ್ಯಾಂಕರ್ ಹಿಂಬದಿ ಚಕ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಮೃತ ಮಹಿಳೆ ಪೆಮ್ಮನಹಳ್ಳಿ ಗ್ರಾಮದ ತಿಪ್ಪಕ್ಕ(50) ಎಂದು ಗುರುತಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.