ADVERTISEMENT

ಶಿಡ್ಲಘಟ್ಟ: ಹೂವಿನ ಕರಗ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 15:43 IST
Last Updated 14 ಏಪ್ರಿಲ್ 2025, 15:43 IST
ಶಿಡ್ಲಘಟ್ಟ ತಾಲ್ಲೂಕು ಜಂಗಮಕೋಟೆ ಧರ್ಮರಾಯಸ್ವಾಮಿ ದ್ರೌಪತಮ್ಮ ದೇವಿ ಹೂವಿನ ಕರಗ ಮಹೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟ ಕಲಾವಿದರಿಗೆ ಪ್ರಣವಾನಂದಪುರಿ ಸ್ವಾಮೀಜಿ  ನೆನಪಿನ ಕಾಣಿಕೆ ವಿತರಿಸಿದರು
ಶಿಡ್ಲಘಟ್ಟ ತಾಲ್ಲೂಕು ಜಂಗಮಕೋಟೆ ಧರ್ಮರಾಯಸ್ವಾಮಿ ದ್ರೌಪತಮ್ಮ ದೇವಿ ಹೂವಿನ ಕರಗ ಮಹೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟ ಕಲಾವಿದರಿಗೆ ಪ್ರಣವಾನಂದಪುರಿ ಸ್ವಾಮೀಜಿ  ನೆನಪಿನ ಕಾಣಿಕೆ ವಿತರಿಸಿದರು   

ಶಿಡ್ಲಘಟ್ಟ: ಯಾರ ಬದುಕು ಶಾಶ್ವತವಲ್ಲ. ಇರುವಷ್ಟು ಕಾಲ ಸಮಾಜಕ್ಕೆ ಒಳಿತು ಮಾಡುವ ನಿಟ್ಟಿನಲ್ಲಿ ಬದುಕು ಸಾಗಲಿ. ನಮ್ಮೆಲ್ಲರ ಬದುಕಿನಲ್ಲಿ ಗುರಿ ಇರಲಿ. ಗುರಿ ಮುಟ್ಟಲು ಗುರುವಿನ ಮಾರ್ಗದರ್ಶನ ಇರಲಿ ಎಂದು ಶಿವನಾಪುರ ವಹ್ನಿಕುಲ ಶಕ್ತಿ ಪೀಠದ ಆದಿಶಕ್ತಿ ಮಹಾ ಸಂಸ್ಥಾನದ ಪ್ರಣವಾನಂದಪುರಿ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಜಂಗಮಕೋಟೆ ಧರ್ಮರಾಯಸ್ವಾಮಿ ದ್ರೌಪತಮ್ಮ ದೇವಿ 73ನೇ ವರ್ಷದ ಹೂವಿನ ಕರಗ ಮಹೋತ್ಸವ ಅಂಗವಾಗಿ ನಡೆದ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೆಪಿಸಿಸಿ ಸಂಯೋಜಕ ರಾಜೀವ್‌ಗೌಡ ಮಾತನಾಡಿ, ಜಂಗಮಕೋಟೆಯಲ್ಲಿ ಎಲ್ಲ ಜಾತಿ,ಧರ್ಮದವರು ಕೂಡ ಸಾಮರಸ್ಯದಿಂದ ಕರಗ ಮಹೋತ್ಸವ ಆಚರಿಸುವುದು ಸಂತಸದ ವಿಚಾರವಾಗಿದೆ ಎಂದರು.

ADVERTISEMENT

ಹೂವಿನ ಕರಗ ಮಹೋತ್ಸವ ಅಂಗವಾಗಿ ಸ್ಥಳೀಯ ವಿದ್ಯಾರ್ಥಿಗಳಿಂದ ಭರತ ನಾಟ್ಯ, ಏಕಪಾತ್ರಾಭಿನಯ, ನಾಟಕ ಪ್ರದರ್ಶನ ನಡೆಯಿತು.

ಧರ್ಮರಾಯಸ್ವಾಮಿ ಸೇವಾ ಅಭಿವೃದ್ದಿ ಟ್ರಸ್ಟ್‌ನ ಗೋಪಾಲಪ್ಪ, ಜಯರಾಂ, ಮುರಳಿ, ಆಂಜಿನಪ್ಪ, ಚಂದ್ರು, ಪುನೀತ್, ವೇಣು, ರೈತ ಮುಖಂಡ ಹೀರೆಬಲ್ಲ ಕೃಷ್ಣಪ್ಪ, ಜೆ.ಎನ್.ನಾಗರಾಜ್, ನಾಗನರಸಿಂಹ, ಹೊಸಪೇಟೆ ಮಂಜುನಾಥ್, ಜಾನಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.