ADVERTISEMENT

ಗುಡಿಬಂಡೆ: ಅಕ್ರಮವಾಗಿ ಸಾಗಿಸುತ್ತಿದ್ದ 20 ಹಸುಗಳ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2025, 13:59 IST
Last Updated 11 ಏಪ್ರಿಲ್ 2025, 13:59 IST
ಪೆರೇಸಂದ್ರ ಬಳಿ ರಾಸುಗಳನ್ನು ರಕ್ಷಿಸಿದ ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗದಳದ ಕಾರ್ಯಕರ್ತರು 
ಪೆರೇಸಂದ್ರ ಬಳಿ ರಾಸುಗಳನ್ನು ರಕ್ಷಿಸಿದ ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗದಳದ ಕಾರ್ಯಕರ್ತರು    

ಗುಡಿಬಂಡೆ: ಚಿಕ್ಕಬಳ್ಳಾಪುರದ ಕಡೆಗೆ ಎರಡು ಗೂಡ್ಸ್‌ ವಾಹನಗಳಲ್ಲಿ ಸಾಗಿಸುತ್ತಿದ್ದ 20 ಹಸುಗಳನ್ನು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ರಕ್ಷಿಸಿದ್ದಾರೆ. 

ಆಂಧ್ರಪ್ರದೇಶದ ಗೋರೆಂಟ್ಲ ಸೇರಿದಂತೆ ವಿವಿಧ ಕಡೆ ಹಸುಗಳನ್ನು ಖರೀದಿಸಲಾಗಿದೆ. ಕರ್ನಾಟಕಕ್ಕೆ ತಂದು ‌ಗೋ ಮಾಂಸಕ್ಕೆ ಮಾರಾಟ ಮಾಡಲು ಮುಂದಾಗಿದ್ದರು. ಈ ಬಗ್ಗೆ ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗದಳದ ಕಾರ್ಯಕರ್ತರಿಗೆ ಮಾಹಿತಿ ದೊರೆತಿತ್ತು. 

ಪೆರೇಸಂದ್ರ ಬಳಿ ಕಾರ್ಯಕರ್ತರು ಗೋವುಗಳನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದರು. ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ವಿಶ್ವಹಿಂದೂ ಪರಿಷತ್‌ ಮುಖಂಡ ವರ್ಲಕೊಂಡ ಸಂತೋಷ್, ತಾಲ್ಲೂಕು ಸಂಚಾಲಕ ಗಗನ್, ನಗರ ಕಾರ್ಯದರ್ಶಿ ರಾಹುಲ್, ಮುಖಂಡರಾದ ಪೇರೆಸಂದ್ರ ವಿನಯ್ ಹಾಗೂ ಕಾರ್ತಿಕ್ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.