ಬಾಗೇಪಲ್ಲಿ: ಪಟ್ಟಣದ ಅರಣೋದಯ ಶಾಲೆಯಲ್ಲಿ ಚಿಕ್ಕಬಳ್ಳಾಪುರದ ಜೈನ್ ಆಸ್ಪತ್ರೆ, ಪಟ್ಟಣದ ಸ್ಕೈ ಚಾರಿಟಬಲ್ ಟ್ರಸ್ಟ್, ತಾಲ್ಲೂಕು ಆರೋಗ್ಯ ಇಲಾಖೆ, ಆರೋಗ್ಯ ಕ್ಷೇಮ ಕೇಂದ್ರದ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಶಿಬಿರದಲ್ಲಿ 200ಕ್ಕೂ ಹೆಚ್ಚು ಜನರು ತಪಾಸಣೆ ಮಾಡಿಸಿಕೊಂಡರು. ರಕ್ತದೊತ್ತಡ, ಸಕ್ಕರೆ ಖಾಯಿಲೆ, ಸಾಮಾನ್ಯ ಚಿಕಿತ್ಸೆ, ಕಣ್ಣಿನ ತಪಾಸಣೆ, ಮೂಳೆ, ಸ್ತ್ರೀ ಮತ್ತು ಪ್ರಸೂತಿ ತಜ್ಞರು, ಮಕ್ಕಳ ತಜ್ಞರು, ವೈದ್ಯರು ಭಾಗವಹಿಸಿದರು.
ಸಾರ್ವಜನಿಕರು ರಕ್ತದ ಒತ್ತಡ ಹಾಗೂ ಸಕ್ಕರೆ ರೋಗ ಪರೀಕ್ಷೆ ಮಾಡಿದರು. ನಂತರ ಜೈನ್ ಆಸ್ಪತ್ರೆಯ ವೈದ್ಯರು ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ಮಾಡಿದರು. ಪಟ್ಟಣದ ನೂರಾನಿ ಮೊಹಾಲ್ಲಾ, ಅಂಬೇಡ್ಕರ್ ಕಾಲೊನಿ, ಗೂಳೂರು ರಸ್ತೆಯ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ಆರೋಗ್ಯ ಪರೀಕ್ಷೆ ಮಾಡಿಸಿದರು. ಕಣ್ಣಿನ ತೊಂದರೆ ಇರುವವರಿಗೆ ಪರೀಕ್ಷೆ ಮಾಡಲಾಯಿತು. ಕಣ್ಣಿಗೆ ಸಂಬಂಧಿತ ತೊಂದರೆ ಇರುವವರು ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರಗಳಲ್ಲಿ ಶಸ್ತ್ರಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು.
ಶಾಲಾವರಣದಲ್ಲಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಿಂದ ಆರೋಗ್ಯ ಸುರಕ್ಷಾ ಚೀಟಿ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಜತೆಗೆ ಉಚಿತವಾಗಿ ಔಷಧಿ ವಿತರಿಸಲಾಯಿತು.
ಸ್ಕೈ ಚಾರಿಟಬಲ್ ಟ್ರಸ್ಟ್ ಮುಖ್ಯಸ್ಥ ಶಬ್ಬೀರ್ ಭಾಷ, ಜೈನ್ ಆಸ್ಪತ್ರೆಯ ಟ್ರಸ್ಟಿ ಅಂಕಿತ್ ಜೈನ್, ಹಿರಿಯ ಶಸ್ತ್ರಚಿಕಿತ್ಸಾ ಮುಖ್ಯಸ್ಥ ಹರಿಪ್ರಸಾದ್, ವೈದ್ಯರಾದ ಕೀರ್ತಿರಾಜ್, ಸಂಧ್ಯಾ, ದಿವ್ಯ, ಚಂದ್ರ, ಸಿಬ್ಬಂದಿಗಳಾದ ನಮಿತಾ, ಗಾಯಿತ್ರಿ, ರಂಜಿತ, ತೌಸಿಫ್, ಶುಶ್ರೂಷಕಿಯರು, ಸರ್ಕಾರಿ ಆಸ್ಪತ್ರೆಯ ಕಾರ್ಯಕ್ರಮ ವ್ಯವಸ್ಥಾಪಕ ಮಹಮದ್ ಮುಸ್ತಾಕ್, ಅರಣೋದಯ ಶಾಲೆಯ ಅಧ್ಯಕ್ಷೆ ಉಮಾ, ಕರವೇ ತಾಲ್ಲೂಕು ಪ್ರಧಾನಕಾರ್ಯದರ್ಶಿ ಜಬೀವುಲ್ಲಾ, ಸ್ವಯಂ ಸೇವಕರಾದ ಪ್ರಿಯಾಂಕ, ಸಮೀರಾ, ಹರ್ಷಿಯಾ, ಭರತ್, ಮಣಿಕಂಠ, ದಿನೇಶ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.