ಪ್ರಾತಿನಿಧಿಕ ಚಿತ್ರ
ಗೌರಿಬಿದನೂರು: ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆ ಸುರಿದಿದೆ. ಭಾನುವಾರ ರಾತ್ರಿಯಿಡೀ ಗುಡುಗು ಮಿಂಚು ಸಮೇತ ಮಳೆ ಆಗಿದೆ. ರಸ್ತೆ, ಚರಂಡಿ, ಮೈದಾನ ಮತ್ತು ಜಮೀನುಗಳಲ್ಲಿ ನೀರು ತುಂಬಿದೆ. ಶನಿವಾರ ರಾತ್ರಿ ಡಿ.ಪಾಳ್ಯ ಹೋಬಳಿ ಲಕ್ಕಸಂದ್ರದಲ್ಲಿ ಸಿಡಿಲು ಬಡಿದು ಎಮ್ಮೆಯೊಂದು ಸಾವನ್ನಪ್ಪಿದೆ. ಪಶು ವೈದ್ಯಾಧಿಕಾರಿ ಡಾ.ಮಾರುತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ ಭಾನುವಾರ ರಾತ್ರಿ 26.8 ಮಿ.ಮಿ, ಡಿ.ಪಾಳ್ಯದಲ್ಲಿ 18.2 ಮಿ.ಮೀ, ಹೊಸೂರು 30.5ಮಿ.ಮೀ, ಮಂಚೇನಹಳ್ಳಿ 13.4 ಮಿ.ಮೀ, ನಗರಗೆರೆ 26.6 ಮಿ.ಮೀ, ತೊಂಡೇಬಾವಿಯಲ್ಲಿ 23.9 ಮಿ.ಮೀ ಮಳೆ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.