ADVERTISEMENT

ಎಚ್ಐವಿ– ಏಡ್ಸ್ ಅರಿವು ಅಭಿಯಾನ

ದುಶ್ಚಟಗಳಿಂದ ದೂರವಿರುವಂತೆ ವಿದ್ಯಾರ್ಥಿಗಳಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2023, 7:02 IST
Last Updated 12 ಜನವರಿ 2023, 7:02 IST
ಗುಡಿಬಂಡೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹದಿಹರೆಯದವರಿಗೆ ಚಟುವಟಿಕೆ ಆಧರಿತ ಆರೋಗ್ಯಕರ ಶಿಕ್ಷಣ ಹಾಗೂ ಎಚ್ಐವಿ ಏಡ್ಸ್ ಕುರಿತ ಆರೋಗ್ಯ ಅಭಿಯಾನದಲ್ಲಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ಆಪ್ತ ಸಮಾಲೋಚಕ ಸುದರ್ಮನ್ ಮಾತನಾಡಿದರು
ಗುಡಿಬಂಡೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹದಿಹರೆಯದವರಿಗೆ ಚಟುವಟಿಕೆ ಆಧರಿತ ಆರೋಗ್ಯಕರ ಶಿಕ್ಷಣ ಹಾಗೂ ಎಚ್ಐವಿ ಏಡ್ಸ್ ಕುರಿತ ಆರೋಗ್ಯ ಅಭಿಯಾನದಲ್ಲಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ಆಪ್ತ ಸಮಾಲೋಚಕ ಸುದರ್ಮನ್ ಮಾತನಾಡಿದರು   

ಗುಡಿಬಂಡೆ: ಏಡ್ಸ್ ಪ್ರಿವೆನ್ಷನ್ ಸೊಸೈಟಿ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಹದಿಹರೆಯದವರಿಗೆ ಚಟುವಟಿಕೆ ಆಧಾರಿತ ಆರೋಗ್ಯಕರ ಶಿಕ್ಷಣ ಹಾಗೂ ಎಚ್ಐವಿ ಏಡ್ಸ್ ಕುರಿತು ಆರೋಗ್ಯ ಅಭಿಯಾನ ಬುಧವಾರ ನಡೆಯಿತು.

ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ಆಪ್ತ ಸಮಾಲೋಚಕ ಸುದರ್ಮನ್ ಮಾತನಾಡಿ, ‘ಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ಜನತೆಗೆ ವಿವರಿಸಿ, ಜಾಗತಿಕವಾಗಿ ಮಾರಕವಾಗಿರುವ ಏಡ್ಸ್ ಕಾಯಿಲೆ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಜಾಗೃತಿ ಮೂಡಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ’ ಎಂದರು.

ಹದಿಹರೆಯದವರಲ್ಲಿ ಉಂಟಾಗುವ ಮಾನಸಿಕ, ದೈಹಿಕ ಬದಲಾವಣೆಗಳು ಮತ್ತು ವೈಯಕ್ತಿಕ ಸ್ವಚ್ಛತೆ, ಕೌಟುಂಬಿಕ ಸ್ವಚ್ಛತೆ ಹಾಗೂ ಸಮುದಾಯ ಸ್ವಚ್ಛತೆಯ ಪ್ರಾಮುಖ್ಯತೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.

ADVERTISEMENT

ಪ್ರಾಮುಖ್ಯತೆ, ಜೀವನದ ಗುರಿ, ಉದ್ದೇಶದ ಕುರಿತು ಮಾಹಿತಿ ನೀಡಿದರು. ಜತೆಗೆ ಮತ್ತು ಅದನ್ನು ತಲುಪುವಲ್ಲಿ ಶಿಕ್ಷಕರ ಮಾರ್ಗದರ್ಶನ

ಹದಿಹರೆಯದವರಲ್ಲಿನ ಸಂವೇಧನಾತ್ಮಕ ಸಮಸ್ಯೆಗಳು ಮತ್ತು ಅವುಗಳಿಂದ ಹೊರಬರುವ ಮಾರ್ಗಗಳು, ಕಲಿಕೆ ಮತ್ತು ಗೊಂದಲ ಹಾಗೂ ಅವುಗಳ ನಿರ್ವಹಣೆ ಬಗ್ಗೆ ಸಂವಾದ ನಡೆಸಲಾಯಿತು.

ಎಚ್ಐವಿ ವೈರಸ್ ಮನುಷ್ಯನ ದೇಹದ ರೋಗ ನಿರೋಧಕ ಶಕ್ತಿಯನ್ನು ಹಂತ ಹಂತವಾಗಿ ನಾಶಗೊಳಿಸಿ, ವ್ಯಕ್ತಿಯನ್ನು ದುರ್ಬಲಗೊಳಿಸುತ್ತದೆ. ಈ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ, ಸೂಕ್ತ ಚಿಕಿತ್ಸೆಯು ರೋಗಿ ಬದುಕಿರುವವರೆಗೆ ಉತ್ತಮ ಜೀವನ ನಡೆಸಲು
ಅನುವಾಗಲಿದೆ. ಎಚ್‌ಐವಿ ಸೋಂಕಿತರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಗೋಪ್ಯವಾಗಿ ಚಿಕಿತ್ಸೆ ನೀಡಲಾಗುತ್ತದೆ. ವಿದ್ಯಾವಂತರು ತಮ್ಮ ನೆರೆಹೊರೆಯವರಿಗೆ ಈ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುವಂತೆ ತಿಳಿಸಿದರು.

ಪ್ರಾಂಶುಪಾಲ ರವೀಂದ್ರ ಮಾತನಾಡಿ, ‘ವಿದ್ಯಾರ್ಥಿಗಳು ದುಶ್ಚಟಗಳಿಂದ ಅಂತರ ಕಾಯ್ದುಕೊಳ್ಳಬೇಕು. ಗುರು ಹಿರಿಯರ ಮಾರ್ಗದರ್ಶನ ಪಡೆದು ಉತ್ತಮ ಭವಿಷ್ಯ ರೂಪಿಡಿಸಿಕೊಳ್ಳುವತ್ತ ಗಮನ ಹರಿಸಬೇಕು. ಹದಿಹರೆಯದ ವಿದ್ಯಾರ್ಥಿಗಳಿಗೆ ಪೋಷಕರು ಮತ್ತು ಶಿಕ್ಷಕರ ಸರಿಯಾದ ಮಾರ್ಗದರ್ಶನ ಅಗತ್ಯ’ ಎಂದು ಪ್ರತಿಪಾದಿಸಿದರು.

ಹಿರಿಯ ಉಪನ್ಯಾಸಕ ಆರ್.ಜಿ. ಸೋಮಶೇಖರ್, ರಸಾಯನಶಾಸ್ತ್ರ ಉಪನ್ಯಾಸಕ ಬಿ.ಜೆ. ರಾಮಣ್ಣ, ಜೀವಶಾಸ್ತ್ರ ಉಪನ್ಯಾಸಕಿ ಮಂಜು ಭಾರ್ಗಬಿ, ಉಪನ್ಯಾಸಕರಾದ ಶಾಲಿನಿ, ನಾಗರತ್ನ,
ಅಂಜಲೀದೇವಿ, ರಾಮಾಂಜಿನಪ್ಪ,
ವರದರಾಜನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.