ADVERTISEMENT

ಗೂಗಲ್ ಪೇ ಹೆಸರಿನಲ್ಲಿ ₹74,499 ವಂಚನೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 5:25 IST
Last Updated 12 ಆಗಸ್ಟ್ 2021, 5:25 IST
.
.   

ಚಿಕ್ಕಬಳ್ಳಾಪುರ: ತಾಲ್ಲೂಕಿನ ಸೀಗಮಾಕಲಹಳ್ಳಿಯ ಎಸ್‌.ವಿ. ಮಂಜುನಾಥ್ ಅವರಿಗೆ ಗೂಗಲ್ ಪೇ ಗ್ರಾಹಕ ಸೇವಾ ಕೇಂದ್ರದ ಹೆಸರಿನಲ್ಲಿ ₹ 74,499 ವಂಚಿಸಲಾಗಿದೆ.

ಸ್ನೇಹಿತ ಮಹೇಶ್ ಕರೆ ಮಾಡಿ ನಿನ್ನ ಮೊಬೈಲ್ ನಂಬರ್‌ಗೆ ತಾಜಾ ಪ್ರಾವಿಜನ್ ಸ್ಟೋರ್ ಎಂಬ ಹೆಸರಿನ ಬ್ಯಾಂಕ್ ಖಾತೆಯು ಲಿಂಕ್ ಆಗಿದೆ ಎಂದು ಹೇಳಿದ. ನಾನು ಇದನ್ನು ಪರಿಶೀಲಿಸಿದೆ. ಸ್ನೇಹಿತನ ಮಾತು ನಿಜವಾಗಿತ್ತು. ನಾನು ಅದನ್ನು ತೆಗೆಸೋಣ ಎಂದು ಅಂತರ್ಜಾಲದಲ್ಲಿ ಗೂಗಲ್ ಪೇ ಗ್ರಾಹಕ ಸೇವಾ ಕೇಂದ್ರದ ಸಂಖ್ಯೆ ಪಡೆದು ಕರೆ ಮಾಡಿದೆ. ಅವರು ANYDESK APP ಡೌನ್‌ಲೋಡ್ ಮಾಡಿಕೊಂಡು ಐಡಿ ನಂಬರ್ ಹೇಳುವಂತೆ ಸೂಚಿಸಿದರೆಂದು ತಿಳಿಸಿದ್ದಾರೆ.

ಅವರು ಹೇಳಿದಂತೆ ಮಾಡಿದೆ. ನನ್ನ ಖಾತೆಯಿಂದ ಮೂರು ಬಾರಿ ಒಟ್ಟು ₹ 74,499 ಕಡಿತವಾಯಿತು. ನನ್ನ ಮೊಬೈಲ್‌ಗೆ ಈ ಸಂದೇಶ ಬಂದಿತು ಎಂದು ಹೇಳಿದ್ದಾರೆ. ವಂಚಕರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸೈಬರ್ ಕ್ರೈಂ ಪೊಲೀಸರಿಗೆ ಮಂಜುನಾಥ್ ದೂರು ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.