ADVERTISEMENT

ಚಿಂತಾಮಣಿ: ರಾಗಿ ಬೀಜೋತ್ಪಾದನೆ ಕ್ಷೇತ್ರೋತ್ಸವ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 4:46 IST
Last Updated 21 ಅಕ್ಟೋಬರ್ 2025, 4:46 IST
ಚಿಂತಾಮಣಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ರಾಗಿ ಬೀಜೋತ್ಪಾದನೆ ಕ್ಷೇತ್ರೋತ್ಸವದಲ್ಲಿ ಭಾಗವಹಿಸಿದ್ದ ವಿಜ್ಞಾನಿಗಳು ಮತ್ತು ರೈತರು
ಚಿಂತಾಮಣಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ರಾಗಿ ಬೀಜೋತ್ಪಾದನೆ ಕ್ಷೇತ್ರೋತ್ಸವದಲ್ಲಿ ಭಾಗವಹಿಸಿದ್ದ ವಿಜ್ಞಾನಿಗಳು ಮತ್ತು ರೈತರು   

ಚಿಂತಾಮಣಿ: ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಗಿ ತಳಿ ಎಂ.ಆರ್. 6 ಬೀಜೋತ್ಪಾದನೆ ಕುರಿತು ಕ್ಷೇತ್ರೋತ್ಸವ ಕಾರ್ಯಕ್ರಮ ಶನಿವಾರ ನಡೆಯಿತು.

ಕೇಂದ್ರದ ಹಿರಿಯ ವಿಜ್ಞಾನಿ ಎಂ.ಪಾಪಿರೆಡ್ಡಿ ಮಾತನಾಡಿ, ವಿವಿಧ ರಾಗಿ ತಳಿಗಳ ಮಾಹಿತಿ ಹಂಚಿಕೊಂಡು ಬೀಜೋತ್ಪಾದನೆಯಲ್ಲಿ ಕೈಗೊಳ್ಳಬೇಕಾದ ಪ್ರಮುಖ ವಿಷಯಗಳ ಬಗ್ಗೆ ವಿಸ್ತಾರವಾಗಿ ಮಾಹಿತಿ ನೀಡಿದರು. ಆಸಕ್ತಿವುಳ್ಳಂತಹ ರೈತರು ಕೃಷಿ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ಬೀಜೋತ್ಪಾದನೆ ಮಾಡಿ ಉತ್ತಮ ಲಾಭಗಳಿಸಬಹುದು ಎಂದು ತಿಳಿಸಿದರು.

ಕೃಷಿ ವಿಜ್ಞಾನ ಕೇಂದ್ರದ ಕ್ಷೇತ್ರ ವ್ಯವಸ್ಥಾಪಕಿ ಎಸ್.ಸಾಕಮ್ಮ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರಗಳ ಚಟುವಟಿಕೆಗಳಲ್ಲಿ ಬೀಜೋತ್ಪಾದನೆ ಅವಶ್ಯವಾಗಿದೆ. ರಾಗಿ ಎಂ.ಆರ್. 6 ತಳಿಯ ಬೀಜೋತ್ಪಾದನೆ ಕೈಗೊಂಡಿರುತ್ತೇವೆ. ಮುಂಗಾರಿನಲ್ಲಿ ಬೆಳೆಯಲು ಸೂಕ್ತವಾಗಿದ್ದು ಅಧಿಕ ಧಾನ್ಯ ಹಾಗೂ ಮೇವಿನ ಇಳುವರಿ ನೀಡುತ್ತದೆ ಎಂದರು.

ADVERTISEMENT

ಒಂದು ಎಕರೆಗೆ ನೀರಾವರಿಯಲ್ಲಿ 16-18 ಕ್ವಿಂಟಲ್ ರಾಗಿ, 3.5- 4 ಟನ್ ಮೇವು. ಖುಷ್ಕಿಯಲ್ಲಿ 9-12 ಕ್ವಿಂಟಲ್ ರಾಗಿ, 2-3 ಟನ್ ಮೇವಿನ ಇಳುವರಿ ಸಿಗುತ್ತದೆ. ತೆನೆಗಳು ಉದ್ದವಾದ ಇಣಕು ಹೊಂದಿದ್ದು, ಇಣಕುಗಳು ಒಳಭಾಗಕ್ಕೆ ಬಾಗಿರುತ್ತವೆ. ರಾಗಿಯಲ್ಲಿ ಅಧಿಕ ಪ್ರಮಾಣದ ಕ್ಯಾಲ್ಸಿಯಂ ಇದ್ದು, ರಾಗಿಯು ಮಧುಮೇಹ ರೋಗಿಗಳಿಗೆ ಉತ್ತಮ ಆಹಾರವಾಗಿದೆ ಎಂದು ತಿಳಿಸಿದರು.

ಕೇಂದ್ರದ ರಾಗಿ ಬೀಜೋತ್ಪಾದನಾ ತಾಕಿಗೆ ರೈತರು ಭೇಟಿ ನೀಡಿದರು. ವಿಜ್ಞಾನಿ ಕೆ.ಸಂಧ್ಯಾ, ಆರ್.ಪ್ರವೀಣಕುಮಾರ್, ತನ್ವೀರ್ ಅಹ್ಮದ್, ರೈತ ಮಹಿಳೆಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.