ADVERTISEMENT

ಚಿಕ್ಕಬಳ್ಳಾಪುರ: ಮಗನ ಹೊಸ ಮನೆಯಿಂದ ಬಿದ್ದು ತಾಯಿ ಸಾವು

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2022, 5:28 IST
Last Updated 8 ನವೆಂಬರ್ 2022, 5:28 IST
   

ಚೇಳೂರು:ಮೂರನೇ ಮಹಡಿಯಲ್ಲಿದ್ದ ಮಗನ ಹೊಸ ಮನೆಯ ಆವರಣದ ಕಸ ಗೂಡಿಸುತ್ತಿದ್ದಮಹಿಳೆಯೊಬ್ಬರು ಭಾನುವಾರ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದುಮೃತಪಟ್ಟಿದ್ದಾರೆ.

ಚೇಳೂರಿನ ಎರಡನೇ ಬ್ಲಾಕ್‌ನ ಪೋಲಿಸ್ ಕ್ವಾರ್ಟರ್ಸ್‌ ಮುಂಭಾಗದ ಬಡಾವಣೆಯಲ್ಲಿ ಮಗ ಹೊಸದಾಗಿ ಕಟ್ಟಿಸಿದ್ದ ಹೊಸ ಮನೆಯ ಪ್ರವೇಶ ಸಮಾರಂಭಕ್ಕೆ ಬಂದಿದ್ದ ಮದ್ದಮ್ಮ (62) ಜಾರಿ ಬಿದ್ದು ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ. ಮೂರನೇ ಮಹಡಿಯಿಂದ ಬಿದ್ದ ರಭಸಕ್ಕೆ ತಲೆ ಚಿಪ್ಪು ಒಡೆದು ಮಿದುಳು ಹೊರ ಬಂದಿತ್ತು.

ಗೆಂಗಿರೆಡ್ಡಿ ಎಂಬುವರು ಗೃಹ ಪ್ರವೇಶಕ್ಕೆ ಸ್ವಗ್ರಾಮ ಬೈರಪ್ಪನಹಳ್ಳಿ ಗ್ರಾಮದಿಂದ ಪೋಷಕರನ್ನು ಕರೆಸಿದ್ದರು. ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು. ಈ ಕುರಿತು ಪ್ರಕರಣ ದಾಖಲಾಗಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.