ADVERTISEMENT

ಬಾಗೇಪಲ್ಲಿ: ಯೋಗಿ ನಾರೇಯಣ ಗ್ರಾಮೋತ್ಸವ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 3:36 IST
Last Updated 29 ಮಾರ್ಚ್ 2021, 3:36 IST
ಬಾಗೇಪಲ್ಲಿ ಪಟ್ಟಣದ ಮುಖ್ಯರಸ್ತೆಯಲ್ಲಿ ಯೋಗಿನಾರೇಯಣ ಭಾವಚಿತ್ರದೊಂದಿಗೆ ಗ್ರಾಮೋತ್ಸವ ನಡೆಯಿತು
ಬಾಗೇಪಲ್ಲಿ ಪಟ್ಟಣದ ಮುಖ್ಯರಸ್ತೆಯಲ್ಲಿ ಯೋಗಿನಾರೇಯಣ ಭಾವಚಿತ್ರದೊಂದಿಗೆ ಗ್ರಾಮೋತ್ಸವ ನಡೆಯಿತು   

ಬಾಗೇಪಲ್ಲಿ: ಕಾಲಜ್ಞಾನಿ ಸದ್ಗುರು ಯೋಗಿ ನಾರೇಯಣ ತಾತಯ್ಯರವರ ಜಯಂತ್ಯುತ್ಸವದ ಅಂಗವಾಗಿ ಶನಿವಾರ ಸಂಜೆ ಪಟ್ಟಣದಮುಖ್ಯರಸ್ತೆಯಲ್ಲಿ ಚಿನ್ನದ ಪಲ್ಲಕ್ಕಿಯಲ್ಲಿ ಯೋಗಿ ನಾರೇಯಣ ಅವರ ಭಾವಚಿತ್ರ ಇಟ್ಟು ಗ್ರಾಮೋತ್ಸವ ಮಾಡಲಾಯಿತು.

ಪಟ್ಟಣದ ನ್ಯಾಷನಲ್ ಕಾಲೇಜಿನ ಮುಂದೆ ಶ್ರೀಯೋಗಿ ನಾರೇಯಣ ಅವರ ಭಾವಚಿತ್ರವನ್ನು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದ ಚಿನ್ನದ ಪಲ್ಲಕ್ಕಿಯಲ್ಲಿ ಇರಿಸಲಾಯಿತು. ನರಸಿಂಹಪ್ಪ ಅವರು ವಿಶೇಷ ಪೂಜೆ, ಯೋಗಿನಾರೇಯಣರ ಅಷ್ಟೋತ್ತರಗಳನ್ನು ಪಠಿಸಿದರು. ಮೆರವಣಿಗೆಯಲ್ಲಿತಾಲ್ಲೂಕಿನ ವಿವಿಧ ಭಜನಾ ಮಂಡಳಿಯವರು ಆಗಮಿಸಿ, ನಾರೇಯಣ ತಾತಯ್ಯರವರ ಸಂಕೀರ್ತನೆಗಳು ಹಾಗೂ ಶ್ರೀರಾಮ ಭಜನೆ ಮಾಡಿದರು.

ಗ್ರಾಮೋತ್ಸವದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ. ಚಿಕ್ಕನರಸಿಂಹಯ್ಯ, ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಮಲಿಂಗಪ್ಪ, ವಕೀಲರಾದ ಬಿ.ಆರ್. ನರಸಿಂಹನಾಯ್ಡು, ಜೆ.ಎನ್. ನಂಜಪ್ಪ, ಮುಖಂಡರಾದ ನರಸಿಂಹಪ್ಪ, ಶ್ರೀನಿವಾಸರೆಡ್ಡಿ, ಬಿಜೆಪಿ ಮಂಡಲ ಅಧ್ಯಕ್ಷಆರ್. ಪ್ರತಾಪ್, ಪುರಸಭಾ ಸದಸ್ಯ ಬಿ.ಎ. ನರಸಿಂಹಮೂರ್ತಿ ಇದ್ದರು.

ADVERTISEMENT

ಪಟ್ಟಣದ ವಾಸವಿ ದೇವಾಲಯದ ಆವರಣದಲ್ಲಿ ಹಾಸಿನಿ, ನಯನಾ ಮತ್ತು ಯಶಸ್ವಿನಿ ನಡೆಸಿಕೊಟ್ಟ ಭರತನಾಟ್ಯ ಕಾರ್ಯಕ್ರಮ ನೆರೆದ ಜನರ ಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುತ್ತೈದೆಯರಿಗೆ ಕೈವಾರದ ಪವಿತ್ರವಾದ ಅರಿಸಿಣ, ಕುಂಕುಮ ಹಾಗೂ ಬಳೆ ಸೇವೆ ಏರ್ಪಡಿಸ ಲಾಗಿತ್ತು.ಯೋಗಿನಾರೇಯಣರವರಿಗೆ ಗುರುಪೂಜೆ ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.