ಚೇಳೂರು: ಇಲ್ಲಿನ ಹೊಸಹುಡ್ಯ ಗ್ರಾಮದ ತಲಾರಿ ಸಿದ್ದಪ್ಪ ಎಂಬುವರಿಗೆ ಸೇರಿದ ಕುರಿ ನಾಲ್ಕು ಮರಿ ಹಾಕಿದೆ.
ಕುರಿ ಸಾಮಾನ್ಯವಾಗಿ ಒಂದು ಅಥವಾ ಎರಡು ಮರಿಗಳನ್ನು ಹಾಕುತ್ತದೆ. ಆದರೆ ಈ ಕುರಿ ನಾಲ್ಕು ಮರಿ ಹಾಕಿರುವುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. ವಿಚಾರ ತಿಳಿದ ಸುತ್ತಮುತ್ತಲಿನ ಜನರು ತಂಡೋಪತಂಡವಾಗಿ ಬಂದು ಮರಿಗಳನ್ನು ವೀಕ್ಷಿಸುತ್ತಿದ್ದಾರೆ. ಎಲ್ಲ ಮರಿಗಳು ಆರೋಗ್ಯದಿಂದಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.