ADVERTISEMENT

ಶಿಡ್ಲಘಟ್ಟ: ಬೀದಿ ನಾಯಿಗಳ‌ ದಾಳಿಗೆ 8 ಕುರಿಗಳು ಬಲಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 12:56 IST
Last Updated 29 ಜೂನ್ 2025, 12:56 IST
ಶಿಡ್ಲಘಟ್ಟ ತಾಲ್ಲೂಕಿನ ಗಂಗನಹಳ್ಳಿ ಗ್ರಾಮದಲ್ಲಿ ಬೀದಿನಾಯಿಗಳ ದಾಳಿಗೆ ಸಿಲುಕಿ ಸತ್ತು ಬಿದ್ದಿದ್ದ ಕುರಿಗಳು 
ಶಿಡ್ಲಘಟ್ಟ ತಾಲ್ಲೂಕಿನ ಗಂಗನಹಳ್ಳಿ ಗ್ರಾಮದಲ್ಲಿ ಬೀದಿನಾಯಿಗಳ ದಾಳಿಗೆ ಸಿಲುಕಿ ಸತ್ತು ಬಿದ್ದಿದ್ದ ಕುರಿಗಳು    

ಶಿಡ್ಲಘಟ್ಟ: ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನಹಳ್ಳಿ ಗ್ರಾಮದಲ್ಲಿ ಭಾನುವಾರ ನಸುಕಿನ ಜಾವ ಸುಬ್ರಮಣಿ ಅವರ ಎಂಟು ಕುರಿಗಳನ್ನು ಬೀದಿನಾಯಿಗಳು ಕಚ್ಚಿ ಸಾಯಿಸಿವೆ.

ಸುಭ್ರಮಣಿ ತಮ್ಮ ಮನೆ ಮುಂಭಾಗದ ಶೆಡ್‌ನಲ್ಲಿ ಕುರಿಗಳನ್ನು ಕಟ್ಟಿದ್ದರು. ಕುರಿಗಳ ಮೇಲೆ ದಾಳಿ ನಡೆಸಿರುವ ಬೀದಿ ನಾಯಿಗಳು ಎಲ್ಲಾ ಕುರಿಗಳನ್ನು ಕಚ್ಚಿ ಸಾಯಿಸಿ, ಎರಡು ಕುರಿಗಳನ್ನು ಅರ್ಧಭಾಗದಷ್ಟು ತಿಂದು ಹಾಕಿವೆ.

ಮಾಲೀಕ ಸುಭ್ರಮಣಿ ಬೆಳಗ್ಗೆ ಕುರಿಗಳಿಗೆ ಮೇವು ಹಾಕಲು ಹೋದಾಗ ಕುರಿಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದು‌ ಕಂಡು ಬಂದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.