ADVERTISEMENT

ಮುಂದಿನ ಪೀಳಿಗೆಗೆ ಇತಿಹಾಸದ ಅರಿವು ಅಗತ್ಯ: ಶಾಸಕ ಬಿ.ಎನ್. ರವಿಕುಮಾರ್

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 13:48 IST
Last Updated 30 ಜೂನ್ 2025, 13:48 IST
ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನಲ್ಲಿ ಶಾಸನ ತಜ್ಞ ಕೆ. ಧನಪಾಲ್ ಮತ್ತು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಅವರು ಶಾಸಕ ಬಿ.ಎನ್.ರವಿಕುಮಾರ್ ಅವರಿಗೆ ಮೇಲೂರಿನಲ್ಲಿರುವ ಆವತಿ ನಾಡಪ್ರಭು ಗೋಪಾಲಗೌಡರ ದಾನ ಶಾಸನದ ಪಠ್ಯ ಮುದ್ರಿಸಿರುವ ಭಿತ್ತಿಪತ್ರ ನೀಡಿದರು
ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನಲ್ಲಿ ಶಾಸನ ತಜ್ಞ ಕೆ. ಧನಪಾಲ್ ಮತ್ತು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಅವರು ಶಾಸಕ ಬಿ.ಎನ್.ರವಿಕುಮಾರ್ ಅವರಿಗೆ ಮೇಲೂರಿನಲ್ಲಿರುವ ಆವತಿ ನಾಡಪ್ರಭು ಗೋಪಾಲಗೌಡರ ದಾನ ಶಾಸನದ ಪಠ್ಯ ಮುದ್ರಿಸಿರುವ ಭಿತ್ತಿಪತ್ರ ನೀಡಿದರು   

ಶಿಡ್ಲಘಟ್ಟ: ತಾಲ್ಲೂಕಿನ ಇತಿಹಾಸ ಅರಿಯಲು ಶಾಸನಗಳ ಅಧ್ಯಯನ ಮುಖ್ಯ. ಪುರಾತತ್ವ ಇಲಾಖೆಯಿಂದ ಶಿಡ್ಲಘಟ್ಟ ತಾಲ್ಲೂಕಿನ ಗ್ರಾಮಾವಾರು ಸರ್ವೆ ನಡೆಸುತ್ತಿರುವುದು ಸ್ವಾಗತಾರ್ಹ. ಮುಂದಿನ ಪೀಳಿಗೆಗೆ ಕ್ಷೇತ್ರದ ಐತಿಹ್ಯಗಳನ್ನು ತಿಳಿಸಬೇಕು ಎಂದು ಶಾಸಕ ಬಿ.ಎನ್. ರವಿಕುಮಾರ್ ತಿಳಿಸಿದರು.

ಪುರಾತತ್ವ ಇಲಾಖೆಯಿಂದ ಶಿಡ್ಲಘಟ್ಟ ತಾಲ್ಲೂಕಿನ ಗ್ರಾಮಾವಾರು ಸರ್ವೆಗೆ ಬಂದಿದ್ದ ಶಾಸನ ತಜ್ಞ ಕೆ.ಧನಪಾಲ್ ಮತ್ತು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎ.ಎಂ. ತ್ಯಾಗರಾಜ್ ಅವರನ್ನು ಭೇಟಿ ಮಾಡಿದ ಶಾಸಕ ಮಾತನಾಡಿದರು. 

ಹಳ್ಳಿಗಳಲ್ಲಿ ಸಾಕಷ್ಟು ಹಳೆಯ ಕಲ್ಲುಗಳನ್ನು ನೋಡುತ್ತೇವೆ. ಆದರೆ, ಅವುಗಳ ಮಹತ್ವ ಎಲ್ಲರಿಗೂ ತಿಳಿದಿರುವುದಿಲ್ಲ. ಪುರಾತತ್ವ ಇಲಾಖೆ ನಡೆಸುತ್ತಿರುವ ಈ ಸರ್ವೆ ಪೂರ್ಣವಾದ ನಂತರ ಇಡೀ ಕ್ಷೇತ್ರದಲ್ಲಿ ಸಿಕ್ಕಿರುವ ಶಾಸನಗಳ ವಿಚಾರ ಪ್ರಕಟಿಸಬೇಕು ಎಂದರು. 

ADVERTISEMENT

ಶಾಸನತಜ್ಞ ಕೆ.ಧನಪಾಲ್ ಮಾತನಾಡಿ, ‘ನಾವು ಶಿಡ್ಲಘಟ್ಟ ಗ್ರಾಮಾವಾರು ಸರ್ವೆ ಮಾಡುವಾಗ ಹಲವು ಅಪರೂಪದ ಶಾಸನ ಮತ್ತು ವೀರಗಲ್ಲುಗಳನ್ನು ನೋಡುತ್ತಿದ್ದೇವೆ. ಅವುಗಳ ಚಿತ್ರ ಮತ್ತು ವಿಡಿಯೊ ಮೂಲಕ ದಾಖಲಿಸುತ್ತಾ, ಅವುಗಳ ಮೇಲೆ ಕೆತ್ತಿರುವ ಅಕ್ಷರಗಳನ್ನು ತಜ್ಞರಿಗೆ ಕಳುಹಿಸಿ ಓದಿಸುತ್ತಿದ್ದೇವೆ. ಗಂಗ, ನೊಳಂಬ, ಚೋಳ, ಹೊಯ್ಸಳ, ವಿಜಯನರದ ಅರಸರ ಕಾಲದ ಇತಿಹಾಸದ ಸಂಗತಿಗಳು ತಿಳಿಯುತ್ತಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.