ADVERTISEMENT

ಚಿಕ್ಕಬಳ್ಳಾಪುರ: ಭೀಮಾಕೋರೆಗಾಂವ್ ವಿಜಯೋತ್ಸವ

​ಪ್ರಜಾವಾಣಿ ವಾರ್ತೆ
Published 2 ಜನವರಿ 2022, 3:53 IST
Last Updated 2 ಜನವರಿ 2022, 3:53 IST
ಚಿಕ್ಕಬಳ್ಳಾಪುರದ ಶಿಡ್ಲಘಟ್ಟದ ಅಂಬೇಡ್ಕರ್ ವೃತ್ತದಲ್ಲಿ ನಡೆದ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಕಾರ್ಯಕರ್ತರು ಪಾಲ್ಗೊಂಡಿದ್ದರು
ಚಿಕ್ಕಬಳ್ಳಾಪುರದ ಶಿಡ್ಲಘಟ್ಟದ ಅಂಬೇಡ್ಕರ್ ವೃತ್ತದಲ್ಲಿ ನಡೆದ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಕಾರ್ಯಕರ್ತರು ಪಾಲ್ಗೊಂಡಿದ್ದರು   

ಚಿಕ್ಕಬಳ್ಳಾಪುರ: ನಗರದ ಶಿಡ್ಲಘಟ್ಟ ವೃತ್ತದಲ್ಲಿ ಕರ್ನಾಟಕದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ಯಿಂದ ಭೀಮಾಕೋರೆಗಾಂವ್ ವಿಜಯೋತ್ಸವ ಆಚರಿಸಲಾಯಿತು. ಅಂಬೇಡ್ಕರ್ ಭವನದಿಂದ ತಮಟೆ ವಾದ್ಯಗಳೊಂದಿಗೆ ಮೆರವಣಿಗೆ ಹೊರಟ ಕಾರ್ಯಕರ್ತರು ಶಿಡ್ಲಘಟ್ಟ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು. ಕ್ರಾಂತಿಗೀತೆಗಳನ್ನು ಹಾಡಿದರು.

ಸಂಘಟನೆ ರಾಜ್ಯ ಸಂಚಾಲಕ ಸುಧಾ ವೆಂಕಟೇಶ್ ಮಾತನಾಡಿ, ಅಂಬೇಡ್ಕರ್ ಪರಿಶಿಷ್ಟ ಸಮುದಾಯದಲ್ಲಿ ಸ್ವಾಭಿಮಾನದ ಕಿಡಿ ಹೊತ್ತಿಸಿದರು. ಇತಿಹಾಸ ಅವಲೋಕಿಸಿದರೆ ಹೆಣ್ಣು, ಹೊನ್ನು ಮಣ್ಣಿಗಾಗಿ ನಡೆದ ಯುದ್ಧಗಳೇ ಹೆಚ್ಚು ಎಂದು ಹೇಳಿದರು.

ಸ್ವಾಭಿಮಾನಕ್ಕಾಗಿ ನಡೆದ ಯುದ್ಧದಲ್ಲಿ 500 ಮಹಾರ್ ಸೈನಿಕರು ಅನ್ನ, ನೀರು ಇಲ್ಲದೆ ಸುಮಾರು ಎರಡು ದಿನಗಳ ಕಾಲ ನಡೆದು 30 ಸಾವಿರ ಪೇಶ್ವೆ ಸೈನಿಕರ ವಿರುದ್ಧ ಯುದ್ಧದಲ್ಲಿ ಗೆಲುವು ಸಾಧಿಸಿದ್ದಾರೆ. ಇವರ ಈ ಕೆಚ್ಚೆದೆಯ ಹೋರಾಟವನ್ನು ಬ್ರಿಟಿಷ್ ಕಮಾಂಡರ್ ಎಫ್.ಎಫ್.ಸ್ಟಾಂಟನ್‌ ‌ಪುಸ್ತಕದಲ್ಲಿ ದಾಖಲಿಸಿದ್ದಾರೆ ಎಂದು ಹೇಳಿದರು.

ADVERTISEMENT

ಲೇಖಕ ಸರ್ದಾರ್ ಚಾಂದ್ ಪಾಷಾ ಮಾತನಾಡಿ, ಶಿವಾಜಿ ಮಹಾರಾಜರ ಆಡಳಿತದಲ್ಲಿ ಶೇ 25ರಷ್ಟು ಮಹರ್ ಸೈನಿಕರು ಸೇನೆಯಲ್ಲಿ ಇದ್ದರು.ಪೇಶ್ವೆಗಳ ಎರಡನೇ ಬಾಜಿರಾಯ ಮಹರ್ ಸೈನಿಕರನ್ನು ಸೈನ್ಯದಿಂದ ಹೊರಗಟ್ಟಿದರು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಕೋಡಿ ರಂಗಪ್ಪ ಭೀಮಾ ಕೋರೆಗಾಂವ್ ಹೋರಾಟ ಇತಿಹಾಸವನ್ನು ಸ್ಮರಿಸಿದರು.

ಗಾ.ನ ಅಶ್ವತ್ಥ್ ಕ್ರಾಂತಿಗೀತೆಗಳನ್ನು ಹಾಡಿದರು. ಪ್ರೊ.ಶಂಕರ್, ಶಿಕ್ಷಕ ಶ್ರೀನಿವಾಸ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಾಗೇಶ್, ಜಿಲ್ಲಾ ಸಂಘಟನೆ ಸಂಚಾಲಕ ಶ್ರೀನಿವಾಸಯ್ಯ, ತಾಲ್ಲೂಕು ಸಂಚಾಲಕ ವೆಂಕಟೇಶ್, ಆರ್‌.ಎಸ್.ಮುನಿಕೃಷ್ಣ, ವಿ.ಪಿ.ಸತೀಶ್‌, ಸತ್ಯಪ್ಪ, ಡೇವಿಡ್, ಕಂದವಾರ ಮಹೇಶ್, ಮುನಿಸ್ವಾಮಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.