ಚಿಂತಾಮಣಿ: ನಗರದ ಎಪಿಎಂಸಿ ಯಾರ್ಡ್‌ನ ಅಂಗಡಿಯೊಂದರಲ್ಲಿ ಕಳ್ಳರು ಭಾನುವಾರ ₹5.10 ಲಕ್ಷ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಮಾರುಕಟ್ಟೆಯ ದವಸಧಾನ್ಯ ವಿಭಾಗದ ಕೈಲಾಸ್ ಟ್ರೇಡರ್ಸ್‌ನ ಕ್ಯಾಷ್ ಟೇಬಲ್‌ಲ್ಲಿಟ್ಟಿದ್ದ ಹಣ ಕಳ್ಳತನವಾಗಿದೆ.
ಭಾನುವಾರ ಸಂತೆಯ ದಿನ ಹೆಚ್ಚು ವ್ಯಾಪಾರವಾಗುತ್ತದೆ. ಅಕ್ಕಿಮಾರಾಟದ ಅಂಗಡಿಯ ಮಾಲೀಕ ಎಂ.ಎಲ್.ರಾಮಕೃಷ್ಣಪ್ಪ ಕ್ಯಾಷ್ ಟೇಬಲ್‌ನಲ್ಲಿ ಹಣ ಇಟ್ಟಿದ್ದರು. ಮತ್ತೊಂದು ಅಂಗಡಿಯಲ್ಲಿ ಅಕ್ಕಿ ನೋಡಿಕೊಂಡು ಬರಲು ಕ್ಯಾಷ್ ಟೇಬಲ್‌ಗೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಈ ಅವಕಾಶವನ್ನು ದುರುಪಯೋಗ ಪಡಿಸಿಕೊಂಡು ಕಳ್ಳರು ಅಂಗಡಿಯ ಒಳ ಹೋಗಿ ಬೀಗ ಕಿತ್ತು ಹಾಕಿ ಅದರಲ್ಲಿದ್ದ ಹಣನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.
ಕೂಡಲೇ ನಗರ ಠಾಣೆಗೆ ಮಾಹಿತಿ ನೀಡಿದ್ದಾರೆ. ಇನ್‌ಸ್ಪೆಕ್ಟರ್ ವಿಜಿಕುಮಾರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಸ್ಥಳಕ್ಕೆ ಕರೆಸಿದ್ದರು.
ಸುಮಾರು 15 ದಿನಗಳ ಹಿಂದೆ ದವಸಧಾನ್ಯಗಳ ಅಂಗಡಿಯಲ್ಲಿ ಇದೇ ರೀತಿ ಕ್ಯಾಷ್ ಬಾಕ್ಸ್‌ನಲ್ಲಿಟ್ಟಿದ್ದ ₹5 ಲಕ್ಷ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.