ಕಟ್ಟೆಮನೆ(ಬಾಳೆಹೊನ್ನೂರು): ಬತ್ತದ ಬೇಸಾಯದಲ್ಲಿ ಆಧುನಿಕ ಕೃಷಿ ಪದ್ದತಿ ಅಳವಡಿಸಿಕೊಂಡಲ್ಲಿ ಅಧಿಕ ಉತ್ಪಾದನೆ ಪಡೆಯಬಹುದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜ ನೆಯ ಅಧಿಕಾರಿ ಕುಸುಮಾದರ ತಿಳಿಸಿದರು.
ಕೊಪ್ಪ ತಾಲ್ಲೂಕಿನ ಜಯಪುರ ಸಮೀಪದ ಕಟ್ಟೆಮನೆಯ ರಾಜಣ್ಣ ಎಂಬುವರ ಕೃಷಿ ಕ್ಷೇತ್ರದಲ್ಲಿ ಮಂಗಳ ವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಿದ್ದ ಬತ್ತದ ಬೇಸಾಯದಲ್ಲಿ ಶ್ರೀ ಪದ್ದತಿ ಅಳವಡಿಕೆ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀ ಪದ್ದತಿ ಮತ್ತು ಸಾಂಪ್ರದಾಯಿಕ ಬತ್ತದ ಕೃಷಿಯ ನಡುವಿನ ವ್ಯತ್ಯಾಸ, ಸಮಯ, ಹಣ ಉಳಿತಾಯದ ಬಗ್ಗೆ ಸವಿವರವಾಗಿ ತಿಳಿಸಿದರು.
ಇದಕ್ಕೂ ಮುನ್ನ ಶ್ರೀ ಪದ್ದತಿಯಲ್ಲಿ ಸಸಿಮಡಿ ತಯಾರಿ, ನಾಟಿ ಗದ್ದೆ ತಯಾರಿ ಕುರಿತು ಪ್ರಾತ್ಯಕ್ಷಿತೆ ನೀಡಲಾಯಿತು. ಸ್ಥಳದಲ್ಲಿ ಜಯಪುರ ವಲಯ ಮೇಲ್ವಿಚಾರಕ ಎಂ.ಭಾಸ್ಕರ್, ನಾಗರಾಜ್ ಸೇರಿದಂತೆ ವಿವಿದ ಸಂಘಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.